ನ.23: ಉಡುಪಿ ಪೊಲೀಸ್ ಫೋನ್ ಇನ್
ಉಡುಪಿ, ನ.22:ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಡೆಸುವ ನೇರ ಫೋನ್ ಇನ್ ಕಾರ್ಯಕ್ರಮ ನಾಳೆ ನ. 23ರ ಬೆಳಗ್ಗೆ 10 ರಿಂದ 11 ರವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಯಲಿದೆ.
ಸಾರ್ವಜನಿಕರು ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದು. ಕರೆ ಮಾಡುವವರ ಗುರುತು ಹಾಗೂ ಅವರು ನೀಡುವ ಮಾಹಿತಿಗಳನ್ನು ಗೌಪ್ಯವಾಗಿರಿಸಲಾಗುವುದು.
ಆಸಕ್ತರು ಬೆಳಗ್ಗೆ 10ರಿಂದ 11ರ ನಡುವೆ ಸ್ಥಿರ ದೂರವಾಣಿ ಸಂಖ್ಯೆ: 0820-2534777ಗೆ ಕರೆ ಮಾಡಬಹುದು ಎಂದು ಎಸ್ಪಿ ಅವರ ಪ್ರಕಟಣೆ ತಿಳಿಸಿದೆ.
Next Story