ಲಾರಿ ಢಿಕ್ಕಿ; ಪಾದಚಾರಿ ಮೃತ್ಯು
ಕುಂದಾಪುರ, ನ. 22: ಬುಧವಾರ ರಾತ್ರಿ 10:15ರ ಸುಮಾರಿಗೆ ವಡೇರಹೋಬಳಿ ಗ್ರಾಮದ ಗಾಂಧಿ ಮೈದಾನದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಅತಿ ವೇಗದಿಂದ ಉಡುಪಿ ಕಡೆಯಿಂದ ಬಂದ ಕಂಟೇನರ್ ಲಾರಿಯೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಉತ್ತಮ ಶಿವಾಜಿ ಕೊಳೆಕರ್ ಎಂಬವರಿಗೆ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





