ಉಡುಪಿ: ನ. 26ರಂದು ಸಂವಿಧಾನ ದಿನಾಚರಣೆ
ಉಡುಪಿ, ನ.22: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ವಕೀಲರ ಸಂಘ ಉಡುಪಿ ಮತ್ತು ಸಂತೆಕಟ್ಟೆಯ ಬೆಲ್ ಓ ಸೀಲ್ ವಾಲ್ವ್ಸ್‌ನ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನ. 26ರಂದು ಬೆಳಗ್ಗೆ 9:30ಕ್ಕೆ ಕಲ್ಯಾಣಪುರ ಸಂತೆಕಟ್ಟೆಯ ಬೆಲ್ ಒ ಸೀಲ್ ವಾಲ್ವ್ಸ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ ನಾಯ್ಕಾ ಉದ್ಘಾಟಿ ಸಲಿದ್ದು, ಬೆಲ್ ಒ ಸೀಲ್‌ನ ಅಧ್ಯಕ್ಷ ಗಿಲ್ಬರ್ಟ್ ಸಾಲಿನ್ಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story