ಸಂಚಾರ ಉಲ್ಲಂಘನೆ: 192 ಪ್ರಕರಣ ದಾಖಲು
ಮಂಗಳೂರು, ನ. 22: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬಸ್‌ಗಳ ವಿರುದ್ಧ ಗುರುವಾರ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಒಟ್ಟು 192 ಪ್ರಕರಣ ದಾಖಲಿಸಿ, 24,100 ರೂ. ದಂಡ ಸಂಗ್ರಹಿಸಿದ್ದಾರೆ.
ಟಿಕೇಟ್ ನೀಡದ 30, ಕರ್ಕಶ ಹಾರ್ನ್ 22, ನಿರ್ಲಕ್ಷದ ಚಾಲನೆ 24, ಸಮವಸ್ತ್ರ ಧರಿಸದ 117 ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





