ನ.26: ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ
ಮಂಗಳೂರು, ನ. 22: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕುಲಶೇಖರ ಇದರ ವತಿಯಿಂದ ಡಾ.ವರ್ಗಿಸ್ ಕುರಿಯನ್ ಜನ್ಮ ದಿನಾಚರಣೆಯ ಪ್ರಯುಕ್ತ ಜರುಗುವ ರಾಷ್ಟ್ರೀಯ ಹಾಲು ದಿನಾಚರಣೆಯ ಅಂಗವಾಗಿ ಎನ್‌ಡಿಪಿ ನೆರವಿನೊಂದಿಗೆ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ಮತ್ತು ಐಎನ್‌ಎಪಿಎಚ್ ಹಾಗೂ ಕೆಚ್ಚಲುಬಾವು ನಿಯಂತ್ರಣ ಕಾರ್ಯಕ್ರಮವು ನ. 26ರಂದು ಬೆಳಗ್ಗೆ 9 ಗಂಟೆಗ ಅಜ್ಜರಕಾಡಿನ ಟೌನ್‌ಹಾಲ್‌ನಲ್ಲಿ ಜರುಗಲಿದೆ.
ಸಭೆಯ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಾಲು ಮಹಾಮಂಡಳಿಯ ನಿರ್ದೇಶಕ ಡಾ. ಡಿ.ಎನ್. ಹೆಗಡೆ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಭಾಗವಹಿಸಲಿದ್ದಾರೆ.
ತಾಂತ್ರಿಕ ಸಮಾವೇಶದಲ್ಲಿ ಡಾ. ವಿಜಯ್ ಕುಮಾರ್, ಡಾ.ಕೃಷ್ಣ, ಡಾ.ಶ್ರೀನಿಕೇತನಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story