ಮದುವೆಗಾಗಿ ಫೇಸ್ಬುಕ್ನಲ್ಲಿ ಮಗಳನ್ನು ಹರಾಜು ಹಾಕಿದ ತಂದೆ !
ಜುಬ (ದಕ್ಷಿಣ ಸುಡಾನ್), ನ. 22: ದಕ್ಷಿಣ ಸುಡಾನ್ನಲ್ಲಿ ವ್ಯಕ್ತಿಯೊಬ್ಬ ತನ್ನ 16 ವರ್ಷದ ಮಗಳನ್ನು ಮದುವೆ ಮಾಡಿಕೊಡಲು ಫೇಸ್ ಬುಕ್ ನಲ್ಲಿ ವರರಿಂದ ಬಿಡ್ಗಳನ್ನು ಆಹ್ವಾನಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಹರಾಜಿನಲ್ಲಿ 500 ದನಗಳು, 3 ಕಾರುಗಳು ಮತ್ತು 10,000 ಡಾಲರ್ಗೆ ತಂದೆ ಮಗಳನ್ನು ಮಾರಾಟ ಮಾಡಿದ್ದಾನೆ.
ಐವರು ಪುರುಷರು ಬಾಲಕಿಗಾಗಿ ಬಿಡ್ ಸಲ್ಲಿಸಿದ್ದಾರೆ. ಅವರ ಪೈಕಿ ಕೆಲವು ದಕ್ಷಿಣ ಸುಡಾನ್ ಸರಕಾರದ ಹಿರಿಯ ಸರಕಾರಿ ಅಧಿಕಾರಿಗಳೆನ್ನಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಫೇಸ್ಬುಕ್ ಭಾರೀ ಟೀಕೆಗೆ ಒಳಗಾಗಿದೆ.
Next Story