'ಮಂದಿರ್ ವಹೀ ಬನಾಯೇಂಗೆ’ ಘೋಷಣೆ ಮೂಲಕ ಇನ್ನೆಷ್ಟು ದಿನ ಜನರು ಮೂರ್ಖರಾಗಬೇಕು: ಉದ್ಧವ್ ಠಾಕ್ರೆ
ಪುಣೆ, ನ.22: ರಾಮ ಮಂದಿರ ವಿಚಾರವನ್ನು ಪ್ರತಿ ಚುನಾವಣೆ ಸಂದರ್ಭದಲ್ಲೂ ಎತ್ತಲಾಗುತ್ತಿದ್ದು, ‘ಮಂದಿರ್ ವಹೀ ಬನಾಯೇಂಗೆ’ ಘೋಷಣೆಯ ಮೂಲಕ ಇನ್ನೆಷ್ಟು ದಿನ ಜನರು ಮೂರ್ಖರಾಗಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಜನಿಸಿದ ಪುಣೆ ಜಿಲ್ಲೆಯ ಶಿವ್ನೇರಿ ಕೋಟೆಯಿಂದ ಮಣ್ಣನ್ನು ಸಂಗ್ರಹಿಸದ ಅವರು, ನವೆಂಬರ್ 25ರಂದು ಅಯೋಧ್ಯೆಗೆ ಈ ಮಣ್ಣನ್ನು ಒಯ್ಯುವುದಾಗಿ ಹೇಳಿದರು. ನವೆಂಬರ್ 25ರಂದು ಅಯೋಧ್ಯೆಗೆ ಭೇಟಿ ನೀಡುತ್ತೇನೆ ಹಾಗು ರಾಮ ಮಂದಿರ ವಿಚಾರವನ್ನು ಪ್ರಧಾನಿ ಮೋದಿಯೊಂದಿಗೆ ಪ್ರಶ್ನಿಸುತ್ತೇನೆ ಎಂದು ಮುಂಬೈಯಲ್ಲಿ ನಡೆದ ದಸರಾ ರ್ಯಾಲಿಯಲ್ಲಿ ಠಾಕ್ರೆ ಘೋಷಿಸಿದ್ದರು.
Next Story