ಮಂಗಳೂರು: ಮಿನ್ಹಾ ಕಿಡ್ಸ್ ಸ್ಪಾಟ್ ಶುಭಾರಂಭ

ಮಂಗಳೂರು, ನ. 22: ‘ಮಿನ್ಹಾ ಫ್ಯಾಬ್ರಿಕ್ ಸ್ಪಾಟ್’ನ ಎರಡನೇ ಮಳಿಗೆ ‘ಮಿನ್ಹಾ ಕಿಡ್ಸ್ ಸ್ಪಾಟ್’ ನಗರದ ಫಳ್ನೀರ್‌ನ ಮಲಬಾರ್ ಗೋಲ್ಡ್‌ನ ಕೆಳ ಅಂತಸ್ತಿನಲ್ಲಿ ಗುರುವಾರ ಆಟಕೋಯ ತಂಙಳ್ ಕುಂಬೋಳ್ ದುಆಗೈದು ಉದ್ಘಾಟಿಸಿದರು.
ಹಿದಾಯತ್ ಫೌಂಡೇಶನ್‌ನ ಅಧ್ಯಕ್ಷ ಹಾಗೂ ಅರಬಿಕ್ ಟೀಚರ್ಸ್ ಟ್ರೇನಿಂಗ್ (ಎಟಿಟಿ) ಪ್ರಾಂಶುಪಾಲ ನಸ್ರೀನ್ ಬಾವ, ಹಿದಾಯತ್ ಫೌಂಡೇಶನ್‌ನ ಎಸ್.ಕೆ. ಸುಮಯ್ಯಾ, ದ.ಕ. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಮೇಯರ್ ಜೆಸಿಂತಾ ಆಲ್ಫ್ರೆಡ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಳಿಗೆಗೆ ಶುಭ ಹಾರೈಸಿದರು.
ಐಡಿಯಲ್ ಎಜುಕೇಶನ್ ಟ್ರಸ್ಟ್ ಕೊರಿಂಗಿಲ ಅಧ್ಯಕ್ಷ ಹಾಸಿಂ ಬಾಅಲವಿ ತಂಙಳ್, ದಾರುಲ್ ಇರ್ಷಾದ್ ಮಾಣಿ ಇದರ ಜೈನುಲ್ ಉಲಮಾ ಅಬ್ದುಲ್ ಹಮೀದ್ ಉಸ್ತಾದ್, ಅಬ್ಬಾಸ್ ಮದನಿ ಪೆರಲ್ತಡ್ಕ, ಮಾಜಿ ಶಾಸಕ ಮೊಯ್ದಿನ್ ಬಾವ, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ಇಮ್ತಿಯಾಝ್ ಅತ್ತಾವರ, ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಹಮೀದ್ ಕೆಮ್ಮೆಮ್ಮಾರ್, ಶರೀಫ್ ಪುಲ್ಚತ್ತಾರು, ಸೂಫಿ ಹಾಜಿ ಬಂಗಾರಡ್ಕ, ಮುಹಮ್ಮದ್ ಹಾಜಿ ಬೈತಡ್ಕ, ಮೂಸಾ ಹಾಜಿ ರೆಂಜ, ಶಾಫಿ ಕೇಕನಾಜೆ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಮ್ಯಾನೇಜರ್ ಶರತ್‌ಚಂದ್ರನ್, ಬೇಬಿ ಚಾಯಿಸ್‌ನ ಅಬ್ದುಲ್ ರಶೀದ್ ಹಾಗೂ ಸಮಿರಾ, ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಮಳಿಗೆ ಮಾಲಕ ಮುಹಮ್ಮದ್ ಕುಕ್ಕುವಳ್ಳಿ, ಫಾತಿಮಾ ಜೋಹರ್ ಕುಕ್ಕುವಳ್ಳಿ ಮತ್ತಿತರರು ಭಾಗವಹಿಸಿದ್ದರು.
ಎರಡನೇ ಮಳಿಗೆ: ಮಿನ್ಹಾ ಫ್ಯಾಬ್ರಿಕ್ ಸ್ಪಾಟ್‌ನ ಮೊದಲ ಮಳಿಗೆ ‘ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಡಿಸೈನರ್ ಸ್ಟುಡಿಯೋ’ ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಕಾರ್ಯಾಚರಿಸುತ್ತಿದ್ದು, ಅದರ ಎರಡನೇ ಮಳಿಗೆಯಾದ ‘ಮಿನ್ಹಾ ಕಿಡ್ಸ್ ಸ್ಪಾಟ್’ ನಗರದ ಫಳ್ನೀರ್‌ನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಕೆಳಅಂತಸ್ತಿನಲ್ಲಿ ಶುಭಾರಂಭಗೊಂಡಿತು.
ಶೇ. 20 ರಿಯಾಯಿತಿ: ನಗರದಲ್ಲಿ ನೂತನವಾಗಿ ಎರಡನೇ ಮಳಿಗೆಯು ಶುಭಾರಂಭಗೊಂಡಿದ್ದು, ಇದರ ಪ್ರಯುಕ್ತ ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿಯನ್ನು ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ನೀಡಿದೆ. ಗ್ರಾಹಕರು ವೈವಿಧ್ಯಮಯ ವಿನ್ಯಾಸದ ಬಗೆ ಬಗೆಯ ಬಟ್ಟೆಗಳನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824- 4278770, 8762733999ನ್ನು ಸಂಪರ್ಕಿಸಬಹುದಾಗಿದೆ.