ಹನೂರು: ಸೂಳ್ಯಯರಪಾಳ್ಯ ಗ್ರಾಮ ಪಂ. ಅಧ್ಯಕ್ಷರಾಗಿ ಸುಧಾಮಣಿ ಪುನರಾಯ್ಕೆ

ಹನೂರು,ನ.22: ತಾಲೂಕಿನ ಸೂಳ್ಯಯರಪಾಳ್ಯ ಗ್ರಾಮ ಪಂಚಾಯತ್ ನಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಅವಿಶ್ವಾಸ ವ್ಯಕ್ತಪಡಿಸಿ ದೂರು ಸಲ್ಲಿಸದ್ದವರೇ ಸಭೆಯಿಂದ ದೂರ ಉಳಿಯುವ ಮೂಲಕ ಹಾಲಿ ಅಧ್ಯಕ್ಷೆ ಸುಧಾಮಣಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಗ್ರಾಪಂ ಸಭಾಂಗಣದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಗುರುವಾರ ಮದ್ಯಾಹ್ನ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಫೌಝಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಪಂಚಾಯತ್ ವ್ಯಾಪ್ತಿಯ ಒಟ್ಟು 18 ಜನ ಸದಸ್ಯರ ಪೈಕಿ 6 ಜನ ಸದಸ್ಯರು ಮಾತ್ರ ಹಾಜರಾಗಿ 12 ಜನ ಗೈರಾಗಿ ಸಭೆಯಿಂದ ದೂರ ಉಳಿದಿದ್ದರು. ಇದರಿಂದಾಗಿ ಹಾಲಿ ಅಧ್ಯಕ್ಷರಾದ ಸುಧಾಮಣಿಯೇ ಅಧ್ಯಕ್ಷರಾಗಿ ಮುಂದುವರೆಯುವಂತೆ ಫೌಝಿಯಾ ತರನ್ನುಮ್ ತಿಳಿಸಿದರು.
ಈ ಸಂದರ್ಭ ರಾಮಾಪುರ ಪೊಲೀಸ್ ಆರಕ್ಷಕ ನೀರಿಕ್ಷಕರಾದ ಮನೋಜ್ ಕುಮಾರ್ ರವರ ನೇತ್ರತ್ವದಲ್ಲಿ ಪೋಲಿಸ್ ಭದ್ರತೆ ಒದಗಿಸಲಾಗಿತ್ತು.
Next Story





