ಮೂಡುಬಿದಿರೆ: 11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನದ ಉದ್ಘಾಟನಾ ಸಮಾರಂಭ

ಮೂಡುಬಿದಿರೆ, ನ. 22: "ನಗರೀಕರಣದ ಹೆಚ್ಚುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಯೇ ನಮ್ಮ ಮುಂದಿರುವ ಮೂಲಭೂತ ಸಮಸ್ಯೆಗಳಾಗಿವೆ. ಇವುಗಳನ್ನು ನಿವಾರಿಸದ ಹೊರತು ಪರಿಸರ ವೈಪರೀತ್ಯಗಳ ತಡೆಗಟ್ಟುವಿಕೆ ಅಸಾಧ್ಯ" ಎಂದು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಂರಕ್ಷಣಾ ಸಚಿವಾಲಯದ ಪ್ರಧಾನ ಸಲಹೆಗಾರ್ತಿ ಡಾ. ಆನಂದಿ ಸುಬ್ರಮಣಿಯನ್ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಎನರ್ಜಿ ಆ್ಯಂಡ್ ವೆಟ್‍ಲ್ಯಾಂಡ್ಸ್ ರೀಸರ್ಚ್‍ಗ್ರೂಪ್- ಸೆಂಟರ್ ಫಾರ್ ಇಕಾಲೋಜಿಕಲ್ ಸೈನ್ಸೆಸ್, ಭಾರತೀಯ ವಿಜ್ಞಾನಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಳ್ವಾಸ್ ಕಾಲೇಜಿನ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ 11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ನಗರಗಳ ಹೆಚ್ಚಳದಿಂದ ಸಸ್ಯವರ್ಗ ಹಾಗೂ ಜಲದ ಸೆಲೆಗಳು ಕ್ಷೀಣಿಸುತ್ತಿವೆ. ನಾನು ಬಹುತೇಕಎಲ್ಲಾ ರಾಜ್ಯಗಳ ಪರಿಸರ ಸಮಸ್ಯೆಗಳ ಬಗೆಗೆ ಪರಿಶೀಲಿಸಿ ದ್ದೇನೆ. ನೀರಿನ ಸಮಸ್ಯೆಎಂಬುದುಎಲ್ಲಾಕಡೆ ಸಾಮಾನ್ಯವಾಗಿಕಂಡುಬರುವ ವಿಷಯವಾಗಿದೆ. ಅಲ್ಲದೇ ಹವಾಮಾನ ಬದಲಾವಣೆ ಮೇಲೂ ಇವು ನಕಾರಾತ್ಮಕ ಪರಿಣಾಮ ಬೀರಿವೆ. ಜಾಗತಿಕತಾಪಮಾನಏರುವಿಕೆಯಿಂದ ಭಾರತದ ಮುಖ್ಯ ನಗರಗಳಲ್ಲಿ ಇಂದು ನಾವು ಚಳಿಗಾಲವನ್ನೇಕಾಣದಾಗಿದ್ದೇವೆ. ಅತೀವ ಪ್ಲಾಸ್ಟಿಕ್ ಬಳಕೆ ನಮ್ಮ ಪರಿಸರವನ್ನು ಮಲಿನಗೊಳಿಸುತ್ತಿದೆ" ಎಂದು ವಿಷಾದಪಡಿಸಿದರು.
"ಪ್ರಕೃತಿಯ ಸಂರಕ್ಷಣೆ ಮಾಡಬೇಕು ಎಂಬ ಅರಿವುಎಲ್ಲರಲ್ಲೂಇದೆ. ಆದರೆಅದನ್ನು ಹೇಗೆ ಕೈಗೊಳ್ಳಬೇಕೆಂಬ ಬಗೆಗೆ ತಿಳಿದಿರುವುದಿಲ್ಲ. ಅದಕ್ಕೆ ಈ ರೀತಿಯ ಕಾರ್ಯಕ್ರಮಗಳು ಮಾದರಿಯಾಗಿ ನಿಲ್ಲುತ್ತವೆ. ಇದೇಆಶಯವನ್ನಿಟ್ಟುಕೊಂಡೇ ನಮ್ಮ ಇಲಾಖೆ ಸಹ `ಗ್ರೀನ್ ಸ್ಕಿಲ್' ಎಂಬ ಹೊಸ ಯೋಜನೆಯನ್ನು ರೂಪಿಸಿದೆ. ಅದರಂತೆ ದೇಶದ ಯುವಕರಿಗೆ ಪರಿಸರ ಉಳಿಸಿ, ಬೆಳೆಸುವ ಕೌಶಲ್ಯಗಳನ್ನು ಬೋಧಿಸಲಾಗುವುದು. ಅದಕ್ಕಾಗಿಯೇ ದೇಶದ 87 ಸ್ಥಳಗಳಲ್ಲಿ ಈ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2021ರೊಳಗೆ 7 ಮಿಲಿಯನ್ ಯುವಶಕ್ತಿಯನ್ನು ಈ ಮೂಲಕ ತಲುಪುವುದು ನಮ್ಮಗುರಿಯಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದ ರೂವಾರಿ ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮಾತನಾಡಿ "ಪ್ರಕೃತಿ ಒಂದು ಕನ್ನಡಿಇದ್ದಂತೆ. ನಾವು ಅದಕ್ಕೆಏನನ್ನು ನೀಡುತ್ತೇವೋ, ಅದೇರೀತಿಯಾದಉತ್ತರವನ್ನೇಅದೂ ನೀಡುತ್ತದೆ. ಹಾಗಾಗಿ ನಾವು ಪರಿಸರಕ್ಕೆ ಸ್ಪಂದಿಸುವ ಬಗೆ ಬಹಳ ಮುಖ್ಯವಾಗುತ್ತದೆ. ಈ ಪ್ರಕೃತಿಯಲ್ಲಿತ್ಯಾಜ್ಯ ಎಂಬ ಯಾವ ವಸ್ತುವೂ ಇಲ್ಲ. ಪ್ರತಿಯೊಂದಕ್ಕೂಅದರದೇಆದಉಪಯೋಗವಿರುತ್ತದೆ. ಅಬ್ದುಲ್ ಕಲಾಂ ಹೇಳಿದಂತೆ ನಮ್ಮ ಪರಿಸರದಲ್ಲಿ ನಮ್ಮ ಅಗತ್ಯಗಳನ್ನು ಪೂರೈಸುವಎಲ್ಲಾ ಸಂಪನ್ಮೂಲಗಳಿವೆ. ಆದರೆ ನಮ್ಮ ದುರಾಸೆಗಳನ್ನಲ್ಲ" ಎಂದು ತಿಳಿಸಿದರು.
`ಬೀಟ್ ಪ್ಲಾಸ್ಟಿಕ್'
"ಈ ಬಾರಿಯ ಪರಿಸರ ದಿನದಂದು ಬೀಟ್ ಪ್ಲಾಸ್ಟಿಕ್ ಎಂದು ಹೇಳಲಾಯಿತು. ಹೀಗಿದ್ದೂ ನಮ್ಮ ಬಳಕೆಯ ಪ್ರಮಾಣತಗ್ಗಿಲ್ಲ. ಈ ಪ್ಲಾಸ್ಟಿಕ್‍ಗಳು ನದಿಗಳಲ್ಲಿ ಒಂದಾಗಿಅಲ್ಲಿನಜೀವವೈವಿಧ್ಯವನ್ನೇ ಹಾಳು ಮಾಡುತ್ತಿವೆ. ಅದೇ ಮತ್ಸ್ಯವನ್ನುಆಹಾರವಾಗಿ ಸೇವಿಸುವ ನಾವೂ ಕೂಡಗೊತ್ತಿಲ್ಲದಂತೆ ಪ್ಲಾಸ್ಟಿಕ್‍ಗೆ ಬಲಿಯಾಗುತ್ತಿದ್ದೇವೆ. 1000 ಪ್ಲಾಸ್ಟಿಕ್ ಬಾಟಲ್‍ನ ನೀರಿನ ಸೇವನೆಯಿಂದಕಾನ್ಸರ್ ಬರುವ ಸಾಧ್ಯತೆಇದೆ. ಈ ಎಲ್ಲಾ ದುಷ್ಪರಿಣಾಮಗಳನ್ನು ಮನಗಂಡು ನಾವು ಅದರ ಬಳಕೆಯನ್ನು ಕಡಿಮೆಗೊಳಿಸಬೇಕು" ಎಂದು ತಿಳಿಸಿದರು.
ಉತ್ತರ ಕನ್ನಡದ ಆಕ್ರಂದನ
"ನಾವು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಸಂಶೋಧನೆ, ಅಲ್ಲಿ 1973 ರಿಂದ 2018ರವರೆಗೆ ಸುಮಾರು ಶೇ 32.9ರಷ್ಟು ಅರಣ್ಯ ಪ್ರದೇಶ ನಾಶಗೊಂಡಿರುವುದು ತಿಳಿದು ಬಂತು. ಅಲ್ಲದೇಅಲ್ಲಿನ 5798 ಕೋಟಿಯಷ್ಟಿರುವಜಿಡಿಪಿ ಪ್ರಮಾಣದಲ್ಲಿ, ಅರಣ್ಯದ ಪಾಲು ಕೇವಲ 180ಕೋಟಿ ಎಂಬುದು ಸಾಬೀತಾಯಿತು. ಈ ಅಂಕಿ ಅಂಶಗಳು ನಮ್ಮದೇಶದಲ್ಲಿ ಪರಿಸರದ ಸ್ಥಿತಿಗತಿಯನ್ನು ಸೂಚಿಸುತ್ತಿವೆ" ಎಂದು ತಿಳಿಸಿದರು.
"ಎಲ್ಲಿ ಜನರ ಜೀವನ ಪದ್ಧತಿ ಯಾವುದೇ ರೀತಿಯಲ್ಲಿ ಭಾದಿತವಾಗದೇ ಇರುತ್ತದೆಯೋ, ಆ ಸ್ಥಳದಲ್ಲಿ ಅಭಿವೃದ್ಧಿ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಂಡಿದೆ ಎಂದರ್ಥ. ಅಂಥಹ ಅಭಿವೃದ್ಧಿಯನ್ನು ಎಲ್ಲಡೆ ಸೃಷ್ಟಿಸುವಲ್ಲಿಯೇ ಯುವಕರು ಶ್ರಮಿಸಬೇಕಿದೆ. ಅದಕ್ಕಾಗಿಯೇ ನಾವು ರಾಜ್ಯದ ಎಲ್ಲಾ ಸ್ಥಳಗಳನ್ನು ಜೀವ ವೈವಿಧ್ಯತೆಯ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಿದ್ದೇವೆ. ಇದರ ಮೂಲವಾಗಿ ಅಭಿವೃದ್ಧಿ ಕಾರ್ಯಗಳು ನಡೆದಲ್ಲಿ ಪರಿಸರ ರಕ್ಷಣೆ ಖಂಡಿತ. ಈ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನುಕೊಡುಗೆಯಾಗಿ ನೀಡಬಹುದಾಗಿದೆ" ಎಂದು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಮಂಗಳೂರು ಕ್ಷೇತ್ರದ ಸಂಸದ ನಳಿನ್ ಕುಮಾರ್‍ಕಟೀಲ್ "ಭಾರತ ದೇವರ ಸೃಷ್ಟಿಯ ದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಎಲ್ಲದರಲ್ಲೂ ನಾವು ದೇವರನ್ನು ಕಾಣುತ್ತೇವೆ, ಪೂಜಿಸುತ್ತಿವೆ. ಅಂತೆಯೇ ನಮ್ಮ ಪಂಚಭೂತಗಳನ್ನು ದೇವರುಎಂದೇ ನಮ್ಮ ಹಿರಿಯರು ನಮ್ಮಲ್ಲಿ ಹೇಳುತ್ತಾ ಬಂದಿದ್ದರು. ದೇವರುಎಂದು ನಂಬಿದಲ್ಲಿ ಮನುಷ್ಯಎಂದೂಅದನ್ನು ಹಾಳುಗೆಡವುದಿಲ್ಲ ಎಂಬುದೇ ಇದಕ್ಕೆ ಮುಖ್ಯಕಾರಣವಾಗಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆ ಎಲ್ಲವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿಕಾಣಲು ಆರಂಭಿಸಿದ ದಿನದಿಂದ ಪರಿಸರ ಸಮಸ್ಯೆಗಳು ಪ್ರಾರಂಭಗೊಂಡವು. ಇಲ್ಲವಾದಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ" ಎಂದು ಹೇಳಿದರು.
"ಪರಿಸರ ಸಂರಕ್ಷಣೆಯಂಥಹದೂರಗಾಮಿ ಚಿಂತನೆಗಳು ನಮ್ಮಂಥ ರಾಜಕಾರಣಿಗಳಿಂದ ಸಾಧ್ಯವಿಲ್ಲ. ಅದನ್ನುಯುವಕರೇ ಕೈಗೊಳ್ಳಬೇಕು. ಅದೇರೀತಿಆಯೋಜನೆಗೊಂಡಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ" ಎಂದು ಸಂತಸ ಸೂಚಿಸಿದರು.
ಈ ಲೇಕ್ ಸಮ್ಮೇಳನದ ಭಾಗವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಿದ ನೈಸರ್ಗಿಕ ಸಂಪನ್ಮೂಲಗಳ ನಕ್ಷೆಯಿರುವ ಭಿತ್ತಿಚಿತ್ರ, ಈ ಸಂಶೋಧನೆಯ ಸಂಪೂರ್ಣ ಮಾಹಿತಿಯನ್ನು ಹೊಂದಿರುವ ಹೊತ್ತಿಗೆ ಹಾಗೂ ಅದರಡಿಜಿಟಲ್‍ರೂಪಾಂತರವನ್ನುಇದೇ ಸಂದರ್ಭದಲ್ಲಿಬಿಡುಗಡೆಗೊಳಿಸಲಾಯಿತು. ಅಲ್ಲದೇಜೀವವೈವಿಧ್ಯಕ್ಷೇತ್ರದಲ್ಲಿ ಸದಾತಮ್ಮಅಮೂಲ್ಯಕೊಡುಗೆ ಸಲ್ಲಿಸಿದ ನಾಲ್ವರುಅಧ್ಯಾಪಕರನ್ನು ಸನ್ಮಾನಿಸಲಾಯಿತು.
ಯಲಹಂಕಾದ ಉಮಾ ಮೋಹನ್, ಬೆಂಗಳೂರಿನ ಶ್ರೀವಿದ್ಯಾ, ಕೆನಡಾದರಾಜಶೇಖರಮೂರ್ತಿ ಹಾಗೂ ಹೈದರಾಬಾದ್‍ನ ನರೇಂದ್ರ ಪ್ರಸಾದ್ ಈ ಸಮ್ಮಾನಕ್ಕೆ ಭಾಜನರಾದರು.
ಈ ಸಮ್ಮೇಳನ ಇನ್ನು ಮೂರು ದಿನಗಳ ಕಾಲ ನಡೆಯಲಿದ್ದುಅಂತರಾಷ್ಟ್ರೀಯಖ್ಯಾತಿಯ ವಿಜ್ಞಾನಿಗಳು ಇಲ್ಲಿ ಭಾಗವಹಿಸಲಿದ್ದಾರೆ. 20 ತಾಂತ್ರಿಕ ಚರ್ಚೆಗಳು, ವಿದ್ಯಾರ್ಥಿಗಳಿಂದ ಪೇಪರ್ ಪ್ರೆಸೆಂಟೇಶನ್‍ಗಳು ಹಾಗೂ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ರಾಜ್ಯದ ವಿವಿಧ ಸ್ಥಳಗಳಿಂದ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಭಾಗವಹಿಸಿದ್ದಾರೆ. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಾಗ್ದೇವಿ ವಿಲಾಸ್‍ಇನ್ಟಿಟ್ಯೂಷನ್‍ನಅಧ್ಯಕ್ಷಡಾ. ಹರೀಶ್‍ಕೃಷ್ಣಮೂರ್ತಿ, ಕೇಂದ್ರ ಸರ್ಕಾರದ ಪರಿಸರ ಮತ್ತುಅರಣ್ಯ ಸಂರಕ್ಷಣಾ ಸಚಿವಾಲಯದಕುಮಾರ್‍ರಜನೀಶ್, ಕರ್ನಾಟಕರಾಜ್ಯದಆರೋಗ್ಯಆಯುಕ್ತ ಪಂಕಜ್ ಪಾಂಡೆ, ವರ್ತೂರು ಕೆ. ಕೆ. ಪ್ರೌಢ ಶಾಲೆಯ ಪ್ರಾಂಶುಪಾಲ ಎಂ. ಎ. ಖಾನ್‍ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನ ಸಮರ್ಪಣೆ
ಈ 11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನವನ್ನು ಇದರ ಮೂಲಭೂತ ಶಕ್ತಿಯಾಗಿದ್ದ ವಿಜ್ಞಾನಿ ದಿ. ಹರೀಶ್ ಭಟ್ ಹಾಗೂ ಸದಾ ಬೆನ್ನೆಲುಬಾಗಿ ಪ್ರೋತ್ಸಾಹಿಸುತ್ತಿದ್ದ ರಾಜಕೀಯಧುರೀಣ ದಿ. ಅನಂತ್ ಕುಮಾರ್ ರಿಗೆ ಸಮರ್ಪಿಸಲಾಯಿತು.