'ಮದೀನಾ' ನನ್ನ ಹಬೀಬ್ ರ ನಾಡು, ಕನ್ನಡ ಪುಸ್ತಕ ಬಿಡುಗಡೆ

ರಿಯಾದ್ , ನ. 22: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ 2019 ಫೆಬ್ರವರಿ 1,2,3 ರಂದು ನಡೆಯಲಿರುವ ಸಿಲ್ವರ್ ಜುಬಿಲಿ ಐತಿಹಾಸಿಕ ಮಹಾ ಸಮ್ಮೇಳನದ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ 25 ಸಮಾಜಮುಖಿ ಯೋಜನೆಗಳಲ್ಲಿ ಒಂದಾದ 'ಪುಸ್ತಕ ಬಿಡುಗಡೆ' ಯೋಜನೆಗೆ ಸೌದಿ ಅರೇಬಿಯ್ಯಾದ ಮದೀನಾ ಮುನವ್ವರಾದಲ್ಲಿ ಚಾಲನೆ ನೀಡಲಾಯಿತು.
ಪ್ರಥಮವಾಗಿ ಅಲ್ ಮದೀನಾ ದಅ್'ವಾ ಕಾಲೇಜು ವಿದ್ಯಾರ್ಥಿ ಅಬ್ದುರ್ರಹ್ಮಾನ್ ವಳಾಲ್ ರಚಿಸಿರುವ 'ಮದೀನಾ,ನನ್ನ ಹಬೀಬ್ ರ ನಾಡು ಕೃತಿಯನ್ನು ಅಲ್ ಮದೀನಾದ ಸಾರಥಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಬಿಡುಗಡೆ ಮಾಡಿದರು.
ಈ ಸಂದರ್ಭ ಅಲ್ ಮದೀನಾ ಅಬುಧಾಬಿ ಘಟಕದ ಉಪಾಧ್ಯಕ್ಷ ಪುತ್ತು ಮೋರ್ಲ, ದುಬೈ ಕಮಿಟಿಯ ನಝೀರ್ ಹಾಜಿ, ಅಬ್ದುರ್ರವೂಫ್ ಜಾರಿಗೆಬೈಲ್ ಸಹಿತ ಅಲ್ ಮದೀನಾದ ಹಿತೈಶಿಗಳು ಉಪಸ್ಥಿತರಿದ್ದರು.
Next Story





