ಡಿಡಿಯರ್ ಡ್ರೋಗ್ಬಾ ಫುಟ್ಬಾಲ್ ನಿಂದ ನಿವೃತ್ತಿ

ಜೊಹಾನ್ಸ್‌ಬರ್ಗ್, ನ.22: ಐವರಿ ಕೋಸ್ಟ್ ಮತ್ತು ಚೆಲ್ಸಿ ತಂಡದ ಫುಟ್ಬಾಲ್ ಆಟಗಾರ ಡಿಡಿಯರ್ ಡ್ರೋಗ್ಬಾ 20 ವರ್ಷಗಳ ಫುಟ್ಬಾಲ್ ವೃತ್ತಿ ಬದುಕಿಗೆ ಬುಧವಾರ ನಿವೃತ್ತಿ ಘೋಷಿಸಿದರು.
40ರ ಹರೆಯದ ಡ್ರೋಗ್ಬಾ ಚೆಲ್ಸಿ ತಂಡದ ಪರ 381 ಪಂದ್ಯಗಳನ್ನು ಆಡಿ 164 ಗೋಲುಗಳನ್ನು ಜಮೆ ಮಾಡಿದ್ದಾರೆ. ಚೆಲ್ಸಿ ತಂಡ ನಾಲ್ಕು ಪ್ರೀಮಿಯರ್ ಲೀಗ್ ಪ್ರಶಸ್ತಿ ಮತ್ತು 4 ಬಾರಿ ಎಫ್‌ಎ ಕಪ್ ಮತ್ತು 2012ರಲ್ಲಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐವರಿ ಕೋಸ್ಟ್ ತಂಡದ ಪರ 65 ಗೋಲುಗಳನ್ನು ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಡ್ರೋಗ್ಬಾ ಇತ್ತೀಚೆಗೆ ಯುನೈಟೆಡ್ ಸಾಕರ್ ಲೀಗ್‌ನಲ್ಲಿ ಫೋನಿಕ್ಸ್ ರೈಸಿಂಗ್ ತಂಡದ ಪರ ಆಡಿದ್ದರು. ಡ್ರೋಗ್ಬಾ 6 ದೇಶಗಳ ಫುಟ್ಬಾಲ್ ಕ್ಲಬ್‌ಗಳಲ್ಲಿ ಆಡಿದ್ದರು. ಫ್ರಾನ್ಸ್ ಮತ್ತು ಇಂಗ್ಲೆಂಡ್‌ನಲ್ಲಿ ಯಶಸ್ಸು ಗಳಿಸಿದ್ದರು. 2006-07 ಮತ್ತು 2009-10ರಲ್ಲಿ ಪ್ರೀಮಿಯರ್ ಲೀಗ್ ಗೋಲ್ಡನ್ ಬೂಟ್ ಪುರಸ್ಕಾರಕ್ಕೆ ಭಾಜನರಾಗಿದ್ದರು.
Next Story





