ಗುಜರಾತ್‌ಗೆ ಭರ್ಜರಿ ಜಯ
ಪ್ರೊ ಕಬಡ್ಡಿ

ಅಹ್ಮದಾಬಾದ್, ನ.22: ಆತಿಥೇಯ ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡ ಗುರುವಾರ ತವರಿನಲ್ಲಿ ಆಡಿದ ತನ್ನ ಕೊನೆಯ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 40-31 ಅಂತರದಿಂದ ಜಯ ಸಾಧಿಸಿತು.
ಹರ್ಯಾಣ ವಿರುದ್ಧ ಮೊದಲ ಜಯ ಸಾಧಿಸಿದ ಗುಜರಾತ್‌ನ ಪರ ರೈಡರ್ ಸಚಿನ್(10 ಅಂಕ)ಹಾಗೂ ಡಿಫೆಂಡರ್ ಪರ್ವೇಶ್(6)ಉತ್ತಮ ಪ್ರದರ್ಶನ ನೀಡಿದರು. ಮನು ಗೊಯಟ್ ಹರ್ಯಾಣ ಪರ 10 ಅಂಕ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
14 ಪಂದ್ಯಗಳಲ್ಲಿ 58 ಅಂಕ ಗಳಿಸಿದ ಗುಜರಾತ್ ‘ಎ’ ಗುಂಪಿನಲ್ಲಿ ಮುಂಬಾವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ. 14 ಪಂದ್ಯಗಳಲ್ಲಿ 26 ಅಂಕ ಗಳಿಸಿದ ಹರ್ಯಾಣ 5ನೇ ಸ್ಥಾನದಲ್ಲಿದೆ.
Next Story





