ನ. 25: ವಿಎಚ್ ಪಿ ಜನಾಗ್ರಹ ಸಭೆಗೆ 50,000 ಮಂದಿ ಪ್ರತಿನಿಧಿಗಳು
ಮಂಗಳೂರು, ನ. 23: ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನ. 25ರಂದು ನಗರದ ಕೇಂದ್ರ ಮೈದಾನದಲ್ಲಿ ಹಮ್ಮಿಕೊಂಡ ಜನಾಗ್ರಹ ಸಭೆಯಲ್ಲಿ 50,000 ಅಧಿಕ ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿಎಚ್ ಪಿ ನಗರಾಧ್ಯಕ್ಷ ಜಗದೀಶ್ ಶೇಣವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ಪುಸ್ತಕ ಬಿಡುಗಡೆ:- ವಿಶ್ವ ಹಿಂದೂ ಪರಿಷತ್ತಿನಿಂದ ಪ್ರಕಟಿತವಾದ ಶ್ರೀ ರಾಮ ಜನ್ಮಭೂಮಿ ಪುಸ್ತಕವನ್ನು ಎಂ.ಬಿ. ಪುರಾಣಿಕ್ ಬಿಡುಗಡೆ ಮಾಡಿದರು. ಪುಸ್ತಕದ ಲೇಖಕ ಡಾ.ಪಿ. ಅನಂತ ಕೃಷ್ಣ ಭಡ್ ಮಾತನಾಡುತ್ತಾ, ರಾಮಮಂದಿರ ನಿರ್ಮಾಣದ ಬಗ್ಗೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ವರಿತವಾಗಿ ಮಾಡುವ ಬದಲು 2019ಕ್ಕೆ ಮುಂದೂಡಿರುವುದರಿಂದ ಮಂದಿರ ನಿರ್ಮಾಣಕ್ಕೆ ಹೋರಾಟ ಅನಿವಾರ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿ ಎಚ್ ಪಿ, ಗೋಪಾಲ ಕುತ್ತಾರ್, ಶರಣ್ ಪಂಪ್ ವೆಲ್ ಮೊದಲಾದವರು ಉಪಸ್ಥಿತರಿದ್ದರು.
Next Story