2 ದಶಕಗಳಲ್ಲಿ ಮೊದಲ ಬಾರಿಗೆ ಬೀಜಿಂಗ್ ಜನಸಂಖ್ಯೆ ಕುಸಿತ
ಶಾಂಘೈ, ನ. 23: ಚೀನಾ ರಾಜಧಾನಿ ಬೀಜಿಂಗ್ನ ಜನಸಂಖ್ಯೆ ಎರಡು ದಶಕಗಳಲ್ಲಿ ಮೊದಲ ಬಾರಿಗೆ 2017ರಲ್ಲಿ ಕುಸಿದಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಕಳೆದ ವರ್ಷ ಖಾಯಂ ನಿವಾಸಿಗಳ ಸಂಖ್ಯೆ 2.17 ಕೋಟಿ ಆಗಿತ್ತು ಹಾಗೂ ಇದು ಅದರ ಹಿಂದಿನ ವರ್ಷಕ್ಕಿಂತ 22,000 ಕಡಿಮೆ ಆಗಿತ್ತು ಎಂದು ಅಧಿಕೃತ ಅಂಕಿಸಂಖ್ಯೆಗಳನ್ನು ಉಲ್ಲೇಖಿಸಿ ಕ್ಸಿನುವ ಗುರುವಾರ ವರದಿ ಮಾಡಿದೆ.
ನಗರದ ಆರು ನಗರ ಜಿಲ್ಲೆಗಳ ಜನರ ಸಂಖ್ಯೆ 2016ರಿಂದ 2017ಕ್ಕೆ 3 ಶೇಕಡದಷ್ಟು ಕುಸಿದಿದೆ.
ಸಾರಿಗೆ ದಟ್ಟಣೆ, ಸಂಪನ್ಮೂಲ ಕೊರತೆ ಮತ್ತು ಮನೆ ಬಲೆ ಏರಿಕೆಯನ್ನು ನಿಭಾಯಿಸುವ ಪ್ರಯತ್ನಗಳ ಭಾಗವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಬೀಜಿಂಗ್ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಬೀಜಿಂಗ್ ಮತ್ತು ಶಾಂಘೈ ಮುಂತಾದ ದೊಡ್ಡ ನಗರಗಳು ಜನಸಂಖ್ಯಾ ಬೆಳವಣಿಗೆಯನ್ನು ತಡೆಯಲು ಮುಂದಾದರೆ, ಒಟ್ಟಾರೆಯಾಗಿ ಚೀನಾ ತನ್ನ ಜನನ ದರವನ್ನು ವೃದ್ಧಿಸಲು ಪ್ರಯತ್ನಿಸುತ್ತಿದೆ.
2017ರಲ್ಲಿ ಚೀನಾದ ಜನನ ದರ ಕುಸಿದಿತ್ತು ಹಾಗೂ ಈ ವರ್ಷ ಅದು ಇನ್ನಷ್ಟು ಕುಸಿಯು ನಿರೀಕ್ಷೆಯಿದೆ.