ಉಡುಪಿ: ಪಿಂಚಣಿ, ಕಂದಾಯ ಅದಾಲತ್
ಉಡುಪಿ, ನ.23: ತಾಲೂಕಿನ ಉಡುಪಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ನ.29 ರಂದು ಬನ್ನಂಜೆಯ ಹಳೆ ಜಿಪಂ ಕಟ್ಟಡದ ಮೊದಲನೆ ಮಹಡಿಯಲ್ಲಿ ನಡೆಯಲಿದೆ. ಬೆಳಗ್ಗೆ 10ರಿಂದ 11ಗಂಟೆಯವರೆಗೆ ಪಿಂಚಣಿ ಅದಾಲತ್ ಹಾಗೂ 11:30ರಿಂದ 1:30ರವರೆಗೆ ಕಂದಾಯ ಅದಾಲತ್ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ: ತಾಲೂಕಿನ ವಂಡ್ಸೆ ಹೋಬಳಿಯ ವಂಡ್ಸೆ ನಾಡಕಛೇರಿಯಲ್ಲಿ ಕುಂದಾಪುರ ಉಪವಿಬಾಗದ ಸಹಾಯಕ ಕಮೀಷನರ್‌ರ ಅಧ್ಯಕ್ಷತೆಯಲ್ಲಿ ನ.27ರಂದು ಅಪರಾಹ್ನ 3ರಿಂದ 4:00ರವರೆಗೆ ಪಿಂಚಣಿ ಅದಾಲತ್ ಹಾಗೂ ಸಂಜೆ 4ರಿಂದ 5:30ರವರೆಗೆ ಕಂದಾಯ ಅದಾಲತ್ ಕಾರ್ಯಕ್ರಮ ನಡೆಯ ಲಿದೆ ಕುಂದಾಪುರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ: ಕಾರ್ಕಳ ತಾಲೂಕಿನ ಅಜೆಕಾರು ಹೋಬಳಿಯಲ್ಲಿ ನ.28ರಂದು ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಪಿಂಚಣಿ ಅದಾಲತ್ ಹಾಗೂ 11:30 ರಿಂದ 1:30ರವರೆಗೆ ಕಂದಾಯ ಅದಾಲತ್ ಕಾರ್ಯಕ್ರಮ ಅಜೆಕಾರು ನಾಡ ಕಚೇರಿಯಲ್ಲಿ ಹಾಗೂ ಕಾರ್ಕಳ ಹೋಬಳಿಯಲ್ಲಿ ಅಪರಾಹ್ನ 3:30ರಿಂದ 4:30 ರವರೆಗೆ ಕಂದಾಯ ಅದಾಲತ್ ಹಾಗೂ ಸಂಜೆ 4:30ರಿಂದ 5:30ರವರೆಗೆ ಪಿಂಚಣಿ ಅದಾಲತ್ ಕಾರ್ಯಕ್ರಮವು ಕಾರ್ಕಳ ತಾಲೂಕು ಕಚೇರಿಯಲ್ಲಿ ಕುಂದಾಪುರ ಸಹಾಯಕ ಕಮೀಷನರ್‌ನ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಕಳ ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.