ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆ

ಮಂಗಳೂರು, ನ. 23: ಮಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು, ದಟ್ಟ ಮೋಡಗಳಿಂದ ಆವರಿಸಿತ್ತು. ನಗರದಲ್ಲಿ ರಾತ್ರಿ ವೇಳೆ ಗುಡುಗು, ಮಿಂಚು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ರಾತ್ರಿ 8:30ಕ್ಕೆ ಆರಂಭಗೊಂಡ ಮಳೆ ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ರಭಸದಿಂದ ಸುರಿದಿದೆ. ಬಳಿಕ ಸಾಧಾರಣ ಮಳೆಯಾಗಿ ಪರಿವರ್ತನೆ ಗೊಂಡಿತು. ನಗರದ ಕಂಕನಾಡಿ, ಬೋಳಾರ, ಪಂಪ್‌ವೆಲ್ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ಮಳೆ ರಾತ್ರಿಯೂ ಮುಂದುವರಿದಿದೆ. ಆದರೆ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಗುರುವಾರವೂ ಸುಬ್ರಹ್ಮಣ್ಯ ಭಾಗದಲ್ಲಿ ಸಾಧಾರಣ ಮಳೆಯಾಗಿತ್ತು. ಕಡಬ, ಉಪ್ಪಿನಂಗಡಿಯ ವಿವಿಧೆಡೆ ತುಂತುರು ಮಳೆಯಾಗಿದ್ದರೆ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳದಲ್ಲಿ ಮಧ್ಯಾಹ್ನದ ಬಳಿಕ ದಟ್ಟ ಮೋಡ ಆವರಿಸಿತ್ತು.
Next Story