ಬಿಜೆಪಿ ಯಾವ ಮಟ್ಟಕ್ಕೂ ಹೋಗಬಹುದು, ಅಯೋಧ್ಯೆಗೆ ಸೇನೆಯನ್ನು ರವಾನಿಸಿ
ಸುಪ್ರೀಂ ಕೋರ್ಟ್ ಗೆ ಅಖಿಲೇಶ್ ಯಾದವ್ ಕೋರಿಕೆ
ಹೊಸದಿಲ್ಲಿ, ನ.23: ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದೂ ಪರಿಷತ್ ನಂತಹ ಸಂಘಟನೆಗಳು ಅಯೋಧ್ಯೆಯಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿರುವ ನಡುವೆ, “ಅಯೋಧ್ಯೆಗೆ ಸೇನೆಯನ್ನು ರವಾನಿಸಬೇಕು” ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಸುಪ್ರೀಂ ಕೋರ್ಟ್ ಗೆ ಕೋರಿದ್ದಾರೆ.
“ಬಿಜೆಪಿಯು ಸುಪ್ರೀಂ ಕೋರ್ಟ್ ಅಥವಾ ಸಂವಿಧಾನದ ಬಗ್ಗೆ ನಂಬಿಕೆ ಹೊಂದಿಲ್ಲ. ಬಿಜೆಪಿಯು ಯಾವ ಮಟ್ಟಕ್ಕೂ ಹೋಗಬಹುದು. ಅಯೋಧ್ಯೆಯಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಿ ಸುಪ್ರೀಂ ಕೋರ್ಟ್ ಅಗತ್ಯಬಿದ್ದರೆ ಇಲ್ಲಿಗೆ ಸೇನೆಯನ್ನು ರವಾನಿಸಬೇಕು” ಎಂದು ಅಖಿಲೇಶ್ ಹೇಳಿದರು.
Next Story