ದೇವಸ್ಥಾನದ ಕೆರೆಗೆ ಬಿದ್ದು ಬಾಲಕ ಮೃತ್ಯು
ಹೆಬ್ರಿ, ನ.23: ಕಬ್ಬಿನಾಲೆ ಗ್ರಾಮದ ಕೆಳಮಠ ಎಂಬಲ್ಲಿರುವ ಶ್ರೀಗೋಪಾಲ ಕೃಷ್ಣ ದೇವಸ್ಥಾನದ ಕೆರೆಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಮುದ್ರಾಡಿ ಗ್ರಾಮದ ಭಕ್ರೆ ನಿವಾಸಿ, ದೇವಸ್ಥಾನದ ಅರ್ಚಕ ಲಕ್ಷ್ಮೀಶ ಹೆಬ್ಬಾರ್ ಎಂಬವರ ಮಗ ಅವನೀಶ್ (9) ಎಂದು ಗುರುತಿಸಲಾಗಿದೆ.
ಕಾರ್ತಿಕ ದೀಪೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಕುಟುಂಬದ ಜೊತೆ ಬಂದಿದ್ದ ಅವನೀಶ್ ದೇವಸ್ಥಾನ ಕೆರೆಯ ದಂಡೆಯ ಬಳಿ ಆಟ ಆಡುತ್ತಿದ್ದ ಎನ್ನಲಾಗಿದೆ.
ಸಂಜೆ 5:30ರಿಂದ ರಾತ್ರಿ 7ಗಂಟೆಯ ಮದ್ಯಾವಧಿಯಲ್ಲಿ ಅವನೀಶ್ ಅಕಸ್ಮಿಕವಾಗಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story