ಮಂಗಳೂರು: ಮಸ್ಜಿದ್ ತಖ್ವಾದಲ್ಲಿ ಮೀಲಾದುನ್ನಬಿ

ಮಂಗಳೂರು, ನ. 23: ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಇದರ ಅಧೀನದಲ್ಲಿರುವ ಮಸ್ಜಿದ್ ತಖ್ವಾ ಪಂಪ್ ವೆಲ್ ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಮೀಲಾದುನ್ನಬಿ ಕಾರ್ಯಕ್ರಮವು ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ನಡೆಯಿತು.
ಮಸೀದಿಯ ಮುಅಝಿನ್ ಇಬ್ರಾಹೀಮ್ ಮುಸ್ಲಿಯಾರ್ ಮೌಲೂದ್ ಪಾರಾಯಣದ ನೇತೃತ್ವ ವಹಿಸಿದರು.
ಉಡುಪಿ ಜಿಲ್ಲಾ ಖಾಝಿ ಪಿ.ಎಂ. ಇಬ್ರಾಹೀಮ್ ಮುಸ್ಲಿಯಾರ್ ಬೇಕಲ, ಹಮೀದ್ ಮುಸ್ಲಿಯಾರ್ ಮಾಣಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಇದರ ಚೆಯರ್ ಮ್ಯಾನ್ ಯಾನೆಪೋಯ ಅಬ್ದುಲ್ಲಾ ಕುಂಞಿ, ಮುತವಲ್ಲಿ ಎಸ್.ಎಂ. ರಶೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಟ್ರಸ್ಟಿಗಳಾದ ಡಿ.ಸಿ. ಹಾಶಿರ್, ಹೈದರ್ ಪರ್ತಿಪಾಡಿ, ಡಿ.ಎಂ. ಶೌಕತ್ ಅಲಿ, ಮುಹಮ್ಮದ್ ಹಾಜಿ, ಅಬೂಸುಫ್ಯಾನ್ ಇಬ್ರಾಹೀಂ ಮದನಿ, ಕೆ. ಮುಹಮ್ಮದ್ ಹಾರಿಸ್, ಮ್ಯಾನೇಜರ್ ಹಸನ್ ಕುಂಞಿ, ಬಿ.ಎಂ. ಬಾವಾ ಹಾಜಿ ಹಾಗು ಜಮಾಅತ್ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
Next Story