ಸ್ವಾಮೀಜಿಯಿಂದ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ನ್ಯಾಯಾಲಯ ಆದೇಶ

ಮಂಗಳೂರು, ನ.24: ಚಿಕ್ಕಮಗಳೂರು ಮೂಲದ ಕಿರುತೆರೆ ನಟಿಯೊಬ್ಬರಿಗೆ ಹುಣಸಮಾರನಹಳ್ಳಿ ಮಠದ ಸ್ವಾಮೀಜಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಆರೋಪದ ಬಗ್ಗೆ ನ್ಯಾಯಾಲಯದ ಆದೇಶದಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ನಟಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಪ್ರಕರಣದಲ್ಲಿ ಭಾಗಿಯಾದ ಸ್ವಾಮೀಜಿ ಸಹಿತ 7 ಮಂದಿಯ ವಿರುದ್ಧ ತನಿಖೆ ನಡೆಸುವಂತೆ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ಕದ್ರಿ ಠಾಣೆಗೆ ಆದೇಶಿಸಿದೆ.
ದಯಾನಂದ ಗುರು ನಂಜೇಶ್ವರ ಸ್ವಾಮೀಜಿ ತೀರ್ಥಹಳ್ಳಿಯಲ್ಲಿದ್ದ ನಟಿಗೆ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಅವರನ್ನು ಸ್ವಾಮೀಜಿ ಬೆಂಗಳೂರಿಗೆ ಕರೆದುಕೊಂಡು ಹೋಗುವ ಬದಲು, ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಹೊಟೇಲೊಂದಕ್ಕೆ ಬರ ಹೇಳಿದ್ದರು. ಅಲ್ಲಿ ದೌರ್ಜನ್ಯ ಎಸಗಿದ್ದರು ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾರೆ.
Next Story