ಕೇರಳ ಯುವ ಜನ ಯಾತ್ರಾ ತಂಡಕ್ಕೆ ಮುಸ್ಲಿಂ ಲೀಗ್ ನಾಯಕರಿಂದ ಸ್ವಾಗತ
ಮಂಗಳೂರು, ನ.24: ‘ಕೋಮುವಾದ ಮುಕ್ತ ಭಾರತ - ಹಿಂಸೆ ರಹಿತ ಕೇರಳ’ ಎಂಬ ಧ್ಯೇಯವಾಕ್ಯದೊಂದಿಗೆ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಸಾರಥ್ಯದಲ್ಲಿ ನ.24ರಿಂದ ಡಿ.24ರವರೆಗೆ ಕಾಸರಗೋಡುವಿನಿಂದ ತಿರುವನಂತಪುರವರೆಗೆ ನಡೆಯುವ ಯುವ ಜನ ಯಾತ್ರೆಗೆ ಶನಿವಾರ ಮಂಜೇಶ್ವರ ಸಮೀಪದ ಉದ್ಯಾವರದಲ್ಲಿ ದ.ಕ.ಜಿಲ್ಲಾ ಮುಸ್ಲಿಂ ಲೀಗ್ ನಾಯಕರು ಸ್ವಾಗತ ಕೋರಿದರು.
ಈ ಸಂದರ್ಭ ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಟಿ.ಯು. ಇಸ್ಮಾಯೀಲ್ ಬಿ.ಸಿ.ರೋಡ್, ಕೋಶಾಧಿಕಾರಿ ತಬೂಕ್ ದಾರಿಮಿ ದೇರಳಕಟ್ಟೆ, ಜಿಲ್ಲಾ ಯೂತ್ ಲೀಗ್ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಮುಸ್ಲಿಂ ಲೀಗ್ ಉಪಾಧ್ಯಕ್ಷ ಶರೀಫ್ ಹಾಜಿ ಜೋಕಟ್ಟೆ, ಎಂಎಸ್‌ಎಫ್ ರಾಷ್ಟ್ರೀಯ ಕೋಶಾಧಿಕಾರಿ ನೌಷಾದ್ ಮಲಾರ್, ಮುನಾಝ್ ತೋಡಾರ್, ನಿಝಾಮ್, ಮುನವ್ವರ್ ತೊಕ್ಕೊಟ್ಟು, ಇಮ್ತಿಯಾಝ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
Next Story