ಕಾರು ಢಿಕ್ಕಿ: ಬೈಕ್ ಸವಾರ ಮೃತ್ಯು
ಹೆಬ್ರಿ, ನ.24: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ರೊಬ್ಬರು ಮೃತಪಟ್ಟ ಘಟನೆ ವರಂಗ ಗ್ರಾಮದ ಮುನಿಯಾಲ್ ಚಟ್ಕಲ್ಪಾದೆ ಎಂಬಲ್ಲಿ ನ.24ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ರಮೇಶ ಶೆಟ್ಟಿಗಾರ ಎಂದು ಗುರುತಿಸಲಾಗಿದೆ. ಮುನಿಯಾಲು ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಇವರ ಬೈಕಿಗೆ ವರಂಗ ಕಡೆಯಿಂದ ಮುನಿಯಾಲು ಕಡೆಗೆ ಬರುತ್ತಿದ್ದ ಸ್ವಿಪ್ಟ್ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕ್ ಸಮೇತ ರಸ್ತೆಯ ಬದಿಯಲ್ಲಿದ್ದ ತೋಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ರಮೇಶ್ ಶೆಟ್ಟಿಗಾರ್ ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿದ್ದ ಕಾಜಲ್ ಗಡಾ, ಚಿನ್ಮಯಿ ಹಾಗೂ ಚಿರಂಜಿತ್ ಡಾನ್ ಎಂಬವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story