ಬೋಟಿನಿಂದ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ನ.24: ಮಲ್ಪೆ ಬಂದರಿನಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟು ಹತ್ತುತ್ತಿದ್ದ ಮೀನುಗಾರರೊಬ್ಬರು ಅಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನ. 23ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕೋಡಿಕನ್ಯಾನದ ಜೆರೂಂ ರೋಡ್ರಿಗಸ್ ಎಂಬವರ ಮಾಲಕತ್ವದ ನಿರ್ಮಲ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದ ರಾಜು(30) ಎಂದು ಗುರುತಿಸ ಲಾಗಿದೆ.
ಇವರು ಬೋಟ್ ಹತ್ತುತ್ತಿರುವಾಗ ಆಯಾ ತಪ್ಪಿಕಾಲು ಜಾರಿ ದಕ್ಕೆಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದು, ಬಳಿಕ ಹುಡುಕಾಡಿದಾಗ ತಡರಾತ್ರಿ ಮೃತದೇಹ ಪತ್ತೆಯಾಯಿತೆನ್ನಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story