ಶೋಪಿಯಾನ: ಅಪಹೃತ ಎಸ್‌ಪಿಒ ಶವವಾಗಿ ಪತ್ತೆ

ಶ್ರೀನಗರ, ನ. 24: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಿಂದ ಅಪಹರಿಸಿರುವ ಮಾಜಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಶಂಕಿತ ಉಗ್ರರು ಶುಕ್ರವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಗೊಂಡ ಗಂಟೆಗಳ ಬಳಿಕ ಗುಂಡಿನಿಂದ ಜರ್ಝರಿತವಾದ ಎಸ್‌ಪಿಒ ಬಶರತ್ ಅಹ್ಮದ್ ವಾಗೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಎಸ್‌ಪಿಒ ಅಲ್ಲದೆ, ಝಾಹಿದ್ ಅಹ್ಮದ್ ವಾಗೆ ಹಾಗೂ ರಿಯಾಝ್ ಅಹ್ಮದ್ ವಾಗೆ ಅವರನ್ನು ಕೂಡ ಶಂಕಿತ ಉಗ್ರರು ಅಪಹರಿಸಿದ್ದರು. ಅನಂತರ ಬಿಡುಗಡೆಗೊಳಿಸಿದ್ದರು.
Next Story





