ಸೋನಿಯಾ ಚಹಾಲ್‌ಗೆ ಬೆಳ್ಳಿ

ಹೊಸದಿಲ್ಲಿ, ನ.24: ಭಾರತದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್ ಶನಿವಾರ 6ನೇ ಬಾರಿ ಚಿನ್ನ ಜಯಿಸಿದ್ದರೆ, ಇದೇ ಮೊದಲ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಸೋನಿಯಾ ಚಹಾಲ್ ಬೆಳ್ಳಿ ಬಾಚಿಕೊಂಡಿದ್ದಾರೆ. 21ರ ಹರೆಯದ ಸೋನಿಯಾ ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಜರ್ಮನಿಯ ಒರ್ನೆಲಾ ಗೇಬ್ರಿಯಲ್ ಎದುರು 1-4 ಅಂತರದಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
Next Story





