‘ಬಹು ಅಂಗಾಂಗ ದಾನದ ದಿನ’ದ ಅಂಗವಾಗಿ ಮ್ಯಾರಥಾನ್

ಮಂಗಳೂರು, ನ.25: ಭಾರತೀಯ ವೈದ್ಯ ಸಂಘ ದ.ಕ. ಜಿಲ್ಲಾ ಘಟಕ, ಮಂಗಳೂರಿನ ತಜ್ಞ ವೈದ್ಯರುಗಳ ಒಕ್ಕೂಟ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಮಾನ ಮನಸ್ಕ ಸಂಘಟನೆಗಳು, ಧಾರ್ಮಿಕ ನಾಯಕರು, ದ.ಕ.ಜಿಲ್ಲಾಡಳಿತ, ಮಂಗಳೂರಿನ ವಿವಿಧ ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ ನಗರದ ಮಂಗಳಾ ಸ್ಟೇಡಿಯಂ ಬಳಿ ರವಿವಾರ ಬೆಳಗ್ಗೆ ಮ್ಯಾರಥಾನ್ ಜರುಗಿತು.
ವಿಶ್ವಾದ್ಯಂತ ನ.27ರಂದು ‘ಬಹು ಅಂಗಾಂಗ ದಾನದ ದಿನ’ ಆಚರಿಸಲಾಗುತ್ತದೆ. ಆ ಹಿನ್ನಲೆಯಲ್ಲಿ ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮ್ಯಾರಥಾನ್ ನಡೆಸಲಾಯಿತು. ಆಚರಣೆಯ ಪ್ರಯುಕ್ತ ನ.25, 26 ಮತ್ತು 27ರಂದು ಎಲ್ಲರೂ ತಮ್ಮ ಮನೆ, ಕಚೇರಿ, ಅಂಗಡಿಮುಂಗಟ್ಟುಗಳ ಬಳಿ ಹಸಿರು ದೀಪ ಉರಿಸಿ ಅಥವಾ ಹಸಿರು ಅಲಂಕಾರ ಮಾಡಿ ಜನಜಾಗೃತಿ ಚಳುವಳಿ ನಡೆಸಲು ಸಂಘಟಕರು ಕರೆ ನೀಡಿದರು.
ಈ ಸಂದರ್ಭ ಭಾರತೀಯ ವೈದ್ಯ ಸಂಘ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು.