ಮಂಗಳೂರು: ನೆಹರೂ ಮೈದಾನ ತಲುಪಿದ ವಿಹಿಂಪ ಜನಾಗ್ರಹ ಮೆರವಣಿಗೆ

ಮಂಗಳೂರು, ನ.25: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಸಂಘಪರಿವಾರದಿಂದ ಹಮ್ಮಿಕೊಳ್ಳಲಾದ ಜನಾಗ್ರಹ ಸಮಾವೇಶದ ಭಾಗವಾಗಿ ಅಂಬೇಡ್ಕರ್ ಸರ್ಕಲ್ ನಿಂದ ಹೊರಟ ಮೆರವಣಿಗೆ ನೆಹರೂ ಮೈದಾನವನ್ನು ತಲುಪಿತು.
ಮೆರವಣಿಗೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಾಮ ಮಂದಿರ ನಿರ್ಮಾಣ ಹಾಗೂ ಹಿಂದೂ ರಾಷ್ಟ್ರ ಸಂಕಲ್ಪ ಕುರಿತ ಘೋಷಣೆಗಳನ್ಮು ಕೂಗಲಾಯಿತು. ಶ್ರೀರಾಮ ಕುರಿತ "ಡಿ.ಜೆ." ಸಾಂಗ್ ಗಳನ್ನು ಹಾಕಲಾಗಿತ್ತು. ಮೆರವಣಿಗೆಯಲ್ಲಿ ಭಗವಾಧ್ವಜಗಳ ಪ್ರದರ್ಶನ ನಡೆಯಿತು.
ಅಂಬೇಡ್ಕರ್ ಸರ್ಕಲ್ ನಿಂದ ಮೆರವಣಿಗೆ ಆರಂಭವಾದಾಗ ಸುಮಾರು 3000 ಮಂದಿ ಪಾಲ್ಗೊಂಡಿದ್ದು, ಕೇಂದ್ರ ಮೈದಾನವನ್ನು ತಲುಪುವ ವೇಳೆ 5000 ದಷ್ಟು ಮಂದಿ ಪಾಲ್ಗೊಂಡರು ಎಂದು ತಿಳಿದುಬಂದಿದೆ.
ವಿಶ್ವ ಹಿಂದೂ ಪರಿಷತ್ ನಿಂದ ಧರ್ಮ ರಕ್ಷಾ ನಿಧಿ ಸಂಗ್ರಹಿಸಲಾಯಿತು.
Next Story