ಸಹ್ಯಾದ್ರಿಗೆ ಕಲ್ಕತ್ತದ ಐಇಐ ಮಾನ್ಯತೆ
ಮಂಗಳೂರು, ನ.25: ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ಮುನ್ನಡೆಸಲು ಶಾಸನಬದ್ಧ ಸಂಸ್ಥೆಯಾಗಿರುವ ಕಲ್ಕತ್ತದ ಇನ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ (ಭಾರತ)ನಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ಎಲ್ಲಾ ಇಂಜಿನಿಯರಿಂಗ್ ಇಲಾಖೆಗಳಾದ ಸಿವಿಲ್, ಇಲೆಕ್ಟ್ರಾನಿಕ್ಸೃ್ ಮತ್ತು ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇನ್ಫರ್ಮೇಶನ್ ಸೈನ್ಸ್ಗೆ ಮಾನ್ಯತೆ ದೊರೆತಿದೆ.
ಇದು ವಿದ್ಯಾರ್ಥಿಗಳು ತಮ್ಮ ಕಾರ್ಯಕ್ರಮಗಳು ಪೂರ್ಣಗೊಂಡಾಗ ಐಇಐ ಸಂಸ್ಥೆಯ ಕಾರ್ಪೋರೆಟ್ ಸದಸ್ಯರಾಗಲು ಅನುವು ಮಾಡಿಕೊಡುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಭಂಡಾರಿ ಫೌಂಡೆಶನ್‌ನ ಅಧ್ಯಕ್ಷ ಮಂಜುನಾಥ್ ಭಂಡಾರಿ ಇಂಜಿನಿಯರ್‌ಗಳು ನಾಲ್ಕುಗೋಡೆಯೊಳಗೆ ಕಲಿತುಕೊಳ್ಳದೆ, ಆರ್‌ಡಿ ಲ್ಯಾಬ್‌ನಲ್ಲಿ ತಮ್ಮ ಯೊಜನೆಗಳ ಮೂಲಕ ಸವಾಲುಗಳನ್ನು ಎದುರಿಸಲು ಮುಂದಾಗಬೇಕು ಮತ್ತು ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಳ್ಳಬೆಕು ಎಂದರು.
Next Story