ಪುತ್ತೂರು: ಕುಮಾರ್ ಪೆರ್ನಾಜೆಗೆ ರಾಜ್ಯಮಟ್ಟದ ಉದಯೋನ್ಮುಖ "ಕೃಷಿಪಂಡಿತ" ಪ್ರಶಸ್ತಿ

ಪುತ್ತೂರು, ನ. 25: ಕೃಷಿ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡುತ್ತಿರುವ ಪುತ್ತೂರು ತಾಲೂಕಿನ ನೆಟ್ಟಣಿಗೆ ಮೂಡ್ನೂರು ಗ್ರಾಮದ ಪೆರ್ನಾಜೆ ನಿವಾಸಿ ಕುಮಾರ್ ಪೆರ್ನಾಜೆ ಅವರು 2016-17 ನೇ ಸಾಲಿನ ರಾಜ್ಯ ಸರ್ಕಾರದ ಕೃಷಿ ಇಲಾಖೆ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿಪಂಡಿತ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಕೃಷಿ ವಿಚಾರದಲ್ಲಿ ಕುಮಾರ್ ಪೆರ್ನಾಜೆ ಅವರ ಸಂಶೋಧನೆ ಮೂಲ ಸ್ವರೂಪದಾಗಿದ್ದು, ವಿಭಿನ್ನ ವಾಗಿದ್ದು ಬೋರ್ಡೋ ದ್ರಾವಣ ಸ್ಪ್ರೇಯಿಂಗ್ ಟೆಕ್ನಿಕ್, ಜೇನು ಕೃಷಿ, ಜೇನು ಗಡ್ಡ, ಸಿಮೆಂಟ್ ಶಿಟ್ ನಲ್ಲಿ ಜೇನು ಪೆಟ್ಟಿಗೆ, ಬರಹ, ಕೋತಿ ಕೋವಿ, ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ, ಕಲಾ ನಿರ್ದೇಶಕರಾಗಿ, ಗ್ರಾಮೀಣ ಸಾಧಕರಿಗೆ ಸನ್ಮಾನ, ಸಮಾಜ ಮುಖಿ ವ್ಯಕ್ತಿತ್ವ, ಇವರು ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ಅನನ್ಯ ಸಮಾಜಮುಖಿ ಸೇವೆ ಮತ್ತು ಕೃಷಿ ಕ್ಷೇತ್ರದಲ್ಲಿ ನ ಸಾಧನೆಯನ್ನು ಗುರುತಿಸಿ 2016-17 ನೇ ಸಾಲಿನ ರಾಜ್ಯ ಸರ್ಕಾರದ ಕೃಷಿ ಇಲಾಖೆ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿಪಂಡಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿಯು 25,000 ನಗದು ಪುರಸ್ಕಾರ, ಸನ್ಮಾನ, ಪ್ರಮಾಣ ಪತ್ರ ನೀಡಿ ಸನ್ಮಾನಿಸ ಲಾಗುವುದು ಎಂದು ತಾಲೂಕು ಸಹಾಯ ನಿರ್ದೇಶಕರಾದ ನಹೀಂ ಹುಸೇನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಾರ್ ಪೆರ್ನಾಜೆ ಅವರು ಈಗಾಗಲೇ ರಾಷ್ಟ್ರೀಯ ಪುರಸ್ಕೃತರಾಗಿದ್ದು ಕೃಷಿಯಲ್ಲಿಯೇ ಎರಡು ತಿಂಗಳಲ್ಲಿ ಪ್ರತಿಷ್ಟಿತ ಮೂರು ಪ್ರಶಸ್ತಿಯನ್ನು ಪಡೆದು ಹ್ಯಾಟ್ರಿಕ್ ಸಾಧಿಸಿದ ಏಕೈಕ ರೈತ, ಉದಯೋನ್ಮುಖ ರೈತ, ಜಿಲ್ಲಾ ರಾಜ್ಯೋತ್ಸವ, ಆವಿಷ್ಕಾರಿ ರೈತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಪೆರ್ನಾಜೆ ನರಸಿಂಹ ಭಟ್, ಮತ್ತು ಶಾರದಾ ದಂಪತಿಗಳ ಪುತ್ರ.