ಹಿರಿಯ ರಾಜಕಾರಣಿ ಜಾಫರ್ ಶರೀಫ್ ನಿಧನ: ಸಚಿವ ಝಮೀರ್ ಅಹ್ಮದ್ ಸಂತಾಪ

ಬೆಂಗಳೂರು, ನ.25: ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ನಿಧನಕ್ಕೆ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮೀಟರ್ ಹಳಿಗಳನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಿದ ಪ್ರಮುಖ ನಿರ್ಧಾರದ ಹಿಂದೆ ಜಾಫರ್ ಶರೀಫ್ ಇದ್ದಾರೆ. ರಾಜ್ಯಕ್ಕೆ ಅವರು ಅಪಾರ ಕೊಡುಗೆಗಳನ್ನು ನೀಡಿದ್ದು, ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು. ಜಾಫರ್ ಶರೀಫ್ ನಮ್ಮೊಂದಿಗಿಲ್ಲ ಎನ್ನುವ ವಿಚಾರ ದುಃಖದಿಂದ ಕೂಡಿದ್ದು, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದೇವರು ಕುಟುಂಬ ಸದಸ್ಯರಿಗೆ ನೀಡಲಿ ಎಂದವರು ಪ್ರಾರ್ಥಿಸಿದ್ದಾರೆ.
Next Story





