ಕೆಮ್ಮಾರ: ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕಟ್ಟಡ ಉದ್ಘಾಟನೆ

ಉಪ್ಪಿನಂಗಡಿ, ನ. 25: ಹಿಮಾಯತುಲ್ ಇಸ್ಲಾಂ ಕಮಿಟಿ, ಗಂಡಿಬಾಗಿಲು ಇದರ ಅಂಗಸಂಸ್ಥೆ ಹಿದಾಯತುಲ್ ಇಸ್ಲಾಂ ಮದರಸ ಮತ್ತು ಶಂಸುಲ್ ಉಲಮಾ ಮಹಿಳಾ ಶರೀಹತ್ ಕಾಲೇಜು ಶಕ್ತಿನಗರ, ಕೆಮ್ಮಾರ ಇದರ ನೂತನ ಕಟ್ಟಡ ಉದ್ಘಾಟನೆ ಮತ್ತು ಮೀಲಾದುನ್ನಬಿ ಸಮಾರಂಭ, ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶಂಶುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ನೂತನ ಕಟ್ಟಡವನ್ನು ಬೆಳ್ತಂಗಡಿ ದಾರುಸ್ಸಲಾಂ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಮದ್ರಸ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದೊಂದಿಗೆ ಶರೀಅತ್ ಶಿಕ್ಷಣ ಅತೀ ಅಗತ್ಯ ಎಂದ ಅವರು ವಿದ್ಯಾರ್ಥಿಗಳು ದಾರಿ ತಪ್ಪುತ್ತಿರುವ ಈ ದಿನಗಳಲ್ಲಿ ಶರೀಅತ್ ಕಾಲೇಜು ಉತ್ತಮ ದಾರಿ ತೋರಿಸುತ್ತಿದೆ, ಸಮುದಾಯ ಶಿಕ್ಷಿತರಾಗುವುದರೊಂದಿಗೆ ಪರಿಸರ ಅಭಿವೃದ್ಧಿ ಆಗುವುದಕ್ಕೂ ಅವಕಾಶ ಆಗಿದೆ ಎಂದರು.
ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯ್ಯದ್ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಮಾತನಾಡಿ ನೆಬಿವರ್ಯರ ಮೇಲಿನ ಪ್ರೀತಿ ಕೇವಲ ಮೀಲಾದುನ್ನಬಿ ಆಚರಣೆಗೆ ಮಾತ್ರ ಸೀಮಿತಿ ಆಗದಿರಲಿ, ಅವರ ಮೇಲಿನ ಪ್ರೀತಿ ಮನಸ್ಸಿನ ಒಳಗೆ ಇರಲಿ, ಅದು ವೇಷದಲ್ಲಿ, ತೋರ್ಪಡಿಕೆಗೆ ಬೇಡ, ತಮ್ಮ ಪ್ರವರ್ತನೆಯಲ್ಲಿ ಇರಲಿ ಎಂದರು.
ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಇದರ ಗೌರವಾಧ್ಯಕ್ಷ ಅಲ್‍ಹಾಜಿ ಡಾ. ಕೆ.ಎಂ. ಶಾಹ್ ಮುಸ್ಲಿಯಾರ್ ದುವಾಶೀರ್ವಚನ ನೀಡಿದರು. ಗಂಡಿಬಾಗಿಲು ಖುತುಬಿಯಾ ಜುಮಾ ಮಸೀದಿ ಖತೀಬ್ ಅಸೈಯ್ಯದ್ ಅನಸ್ ಅಲ್‍ಅಝ್‍ಹರಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಉಪ್ಪಿನಂಗಡಿ ಮಾಲಿಕ್‍ದೀನಾರ್ ಜುಮಾ ಮಸೀದಿ ಖತೀಬ್ ಅಲ್‍ಹಾಜಿ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ ಧಾರ್ಮಿಕ ಉಪನ್ಯಾಸ ನೀಡಿದರು.
ಮಂಗಳೂರು ಡೆಕ್ಕನ್ ಪ್ಲಾಸ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ಅಸ್ಕರ್ ಹಾಜಿ, ದುಬೈ ದಾರುನ್ನೂರು ಸಮಿತಿ ಅಧ್ಯಕ್ಷ ಬದ್ರುದ್ದೀನ್ ಹೇಂತಾರ್, ಮಂಗಳೂರು ನಂಡೆ ಪೆಂಙಳ್ ಸಂಸ್ಥೆ ಅಧ್ಯಕ್ಷ ನೌಶದ್ ಹಾಜಿ ಸೂರಲ್ಪಾಡಿ, ಮಂಗಳೂರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ಹಾಜಿ ಮಹಮ್ಮದ್ ರಫೀಕ್ ಮಾಸ್ಟರ್ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾರಂಭದಲ್ಲಿ ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುರ್ಷಿದ್ ಫೈಝಿ ಕಕ್ಕಿಂಜೆ, ಸಿದ್ದಿಕ್ ಫೈಝಿ ಆತೂರು, ಮಠ ಜುಮಾ ಮಸೀದಿ ಖತೀಬ್ ಇಬ್ರಾಹಿಂ ದಾರಿಮಿ, ಮಹಮ್ಮದ್ ಶರೀಫ್ ಅಝ್‍ಹರಿ ಪೆರಿಯಡ್ಕ, ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಅಧ್ಯಕ್ಷ ಎನ್.ಎ. ಇಸಾಕ್, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷ ಬಿ.ಕೆ. ಮಹಮ್ಮದ್ ಹಾಜಿ ಕುಂಡಾಜೆ, ಅಬ್ದುಲ್ ಅಜೀಝ್ ಕಿಡ್ಸ್, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ ಕೊೈಲ, ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಉಪಾಧ್ಯಕ್ಷ ಜಿ. ಇಸ್ಮಾಯಿಲ್, ಉಪ್ಪಿನಂಗಡಿ ವರ್ತಕ ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಎಸ್‍ಕೆಎಸ್‍ಎಸ್‍ಎಫ್ ಟ್ರೆಂಡ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹಮೀದ್ ಕಣ್ಣೂರು, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಕೊೈಲ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎ. ಸುಲೈಮಾನ್, ಕೆ.ಕೆ. ನಝೀರ್, ನೀರಾಜೆ ಮದ್ರಸ ಸಮಿತಿ ಅಧ್ಯಕ್ಷ ಇಬ್ರಾಹಿಂ ಮೋನು, ಕೊೈಲ ಸೌಹಾರ್ದ ವೇದಿಕೆ ಅಧ್ಯಕ್ಷ ಎನ್.ಕೆ. ನಝೀರ್, ಆಝಾದ್ ಹೇಂತಾರ್, ಎಸ್‍ಕೆಎಸ್‍ಎಸ್‍ಎಫ್ ಗಂಡಿಬಾಗಿಲು ಘಟಕಗಳ ಅಧ್ಯಕ್ಷ ಎಸ್.ಪಿ. ಖಲಂದರ್, ಆತೂರು ಘಟಕದ ಅಧ್ಯಕ್ಷ ಎಸ್.ಕೆ. ಸಿದ್ದಿಕ್, ಕೆಮ್ಮಾರ ಘಟಕದ ಅಧ್ಯಕ್ಷ ಎನ್.ಎ. ಅಬ್ದುಲ್ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.
ಕೆಮ್ಮಾರ ಹಿದಾಯತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಅಬ್ದುಲ್ಲ ಮುಸ್ಲಿಯಾರ್ ಸ್ವಾಗತಿಸಿ, ಬಡಿಲ ಹುಸೇನ್ ವಂದಿಸಿದರು. ರಫೀಕ್ ಆತೂರು ಕಾರ್ಯಕ್ರಮ ನಿರೂಪಿಸಿದರು.







