ಅಲ್ ಮದೀನಾ ಮಂಜನಾಡಿ ಸೌದಿ ರಾಷ್ಟ್ರೀಯ ಸಮಿತಿ ಅಸ್ಥಿತ್ವಕ್ಕೆ

ಮಂಗಳೂರು, ನ. 25: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಲ್ ಮಂಜನಾಡಿ ಇದರ ಸೌದಿ ರಾಷ್ಟ್ರೀಯ ಸಮಿತಿಯನ್ನು ಅಲ್ ಮದೀನಾ ಸ್ಥಾಪಕ ಅಬ್ಬಾಸ್ ಉಸ್ತಾದ್ ಅವರ ನೇತೃತ್ವದಲ್ಲಿ ಜಿದ್ದಾ ಶರಫಿಯ್ಯಾದ ಕೆಸಿಎಫ್ ಭವನದಲ್ಲಿ ರಚಿಸಲಾಯಿತು.
ಆರಂಭದಲ್ಲಿ ಅಲ್ ಮದೀನ ಜಿದ್ದಾ ಘಟಕದ ವತಿಯಿಂದ ಸಂಸ್ಥೆಯ ಬೆಳ್ಳಿಹಬ್ಬದ ಪ್ರಚಾರ ಸಭೆ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಅಧ್ಯಕ್ಷತೆಯಲ್ಲಿ ನಡೆಯಿತು. ಜಿದ್ದಾ ಘಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಎಣ್ಮೂರು ಸ್ವಾಗತ ಭಾಷಣ ಮಾಡಿದರು. ಸಭೆಯ ಉದ್ಘಾಟನೆಯನ್ನು ಅಲ್ ಮದೀನಾ ದಮ್ಮಾಮ್ ವಲಯ ಅಧ್ಯಕ್ಷ ಎನ್ ಎಸ್ ಅಬ್ದುಲ್ಲಾ ಮಂಜನಾಡಿ ನಿರ್ವಹಿಸಿ, ಸಂಧರ್ಭೋಚಿತವಾಗಿ ಮಾತನಾಡಿದರು.
ಅಲ್-ಮದೀನಾ ದಮ್ಮಾಮ್ ವಲಯ ಪ್ರ ಕಾರ್ಯದರ್ಶಿ ಎಂ ಜಿ ಇಖ್ಬಾಲ್ ಮಲ್ಲೂರು ಸ್ಥಾಪನೆ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಬ್ಬಾಸ್ ಉಸ್ತಾದ್ ಸಿಲ್ವರ್ ಜುಬಿಲೀಗಳಂತಹಾ ಸಮ್ಮೆಳನಗಳಿಂದ ಅದೆಷ್ಟೋ ಸಮಾಜ ಸೇವೆಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಬಡವರಿಗೆ ಹಾಗೂ ಸ್ಥಾಪನೆಗೆ ಹಲವಾರು ಉಪಕಾರವಾಗುತ್ತದೆ ಎಂದರು.
ಡಿ ಕೆ ಎಸ್ ಸಿ ಜಿದ್ದಾ ಘಟಕ ಅಧ್ಯಕ್ಷ ಸಯ್ಯಿದ್ ಝಕರಿಯಾ ಸಖಾಫಿ ತಂಙಳ್, ನಾವುಂದ, ಅಬ್ದುರ್ರಹ್ಮಾನ್ ಅಲ್-ಬುಖಾರಿ ತಂಙಳ್ ಉಚ್ಚಿಲ, ಅಲ್-ಮದೀನಾ ದಮ್ಮಾಮ್ ಸಿಲ್ವರ್ ಜೂಬಿಲೀ ಚೇರ್ಮಾನ್ ಬಶೀರ್ ತೋಟಲ್, ಅಲ್-ಮದೀನಾ ದಮ್ಮಾಮ್ ಯುನಿಟ್ ಪ್ರಕಾರ್ಯದರ್ಶಿ ಉಸ್ಮಾನ್ ಮಂಜನಾಡಿ ಹಾಗೂ ಅಲ್ ಮದೀನಾ ಮಂಜನಾಡಿಯ ಅಬ್ದುಲ್ ರವೂಫ್ ಮುಸ್ಲಿಯಾರ್ ಜಾರಿಗೆಬೈಲು, ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷ ಹನೀಫ್ ಸಖಾಫಿ ಸಾಲೆತ್ತೂರು, ಅಲ್-ಮದೀನಾ ಜಿದ್ದಾ ಸಮಿತಿ ಅಧ್ಯಕ್ಷ ಹೈದರ್ ಹಾಜಿ, ಅಲ್-ಮದೀನಾ ಜಿದ್ದಾ ಸಮಿತಿ ಕೋಶಾಧಿಕಾರಿ ಮೊಯ್ದಿನ್ ಹಾಜಿ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಶೈಖುನಾ ಉಸ್ತಾದರನ್ನು ಅಲ್ ಮದೀನಾದ ಹಿರಿಯ ನಾಯಕರು ಶಾಲು ಹೊದಿಸಿ ಗೌರವಿಸಿದರರು. ನಂತರ ಶೈಖುನಾ ರವರು ಅಧಿಕೃತವಾಗಿ ಅಲ್ ಮದೀನಾ ರಾಷ್ಟ್ರೀಯ ಅಧ್ಯಕ್ಷರಾಗಿ ಎನ್ ಎಸ್ ಅಬ್ದುಲ್ಲಾ ಮಂಜನಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜಿ. ಇಕ್ಬಾಲ್ ಮಲ್ಲೂರು, ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಮದನಿ ಮಂಜನಾಡಿ ರಿಯಾದ್ ಅವರನ್ನು ಆಯ್ಕೆ ಮಾಡಿದರು.
ಮುಹಮ್ಮದ್ ಕಲ್ಲರ್ಬೆ ವಂದಿಸಿದರು.