ಸಜೀವ ಶೆಲ್ ಸ್ಫೋಟಿಸಿ ಮೂವರು ಮಕ್ಕಳು ಮೃತ್ಯು

ಇಟಾನಗರ, ಡಿ.12: ಅರುಣಾಚಲಪ್ರದೇಶದ ಅಂಜಾವ್ ಜಿಲ್ಲೆಯ ಚಿರಾಂಗ್ ಗ್ರಾಮದಲ್ಲಿ ಸಜೀವ ಶೆಲ್ಲೊಂದು ಸ್ಫೋಟಿಸಿ ಕನಿಷ್ಠ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಸ್ಫೋಟಕವು ಭಾರತೀಯ ಸೇನೆಯ ಫೈರಿಂಗ್ ರೇಂಜ್ (ಗುಂಡೆಸೆತ ಅಭ್ಯಾಸವಲಯ)ನಲ್ಲಿ ಬಳಕೆಯಾಗಿದ್ದ ಶೆಲ್ ಎನ್ನಲಾಗಿದೆ.
‘‘ಗ್ರಾಮಸ್ಥರು ಬಳಕೆಯಾದ ಈ ಶೆಲ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು ಹಾಗೂ ಅದರಲ್ಲಿರುವ ಅಲ್ಯುಮಿನಿಯಂನ್ನು ಕರಗಿಸುತ್ತಿದ್ದರು’’ ಎಂದು ಅಂಜಾವ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹಾಬುಂಗ್ ಹೈಲ್ಯಾಂಗ್ ತಿಳಿಸಿದ್ದಾರೆ. ಶನಿವಾರ ಸ್ಫೋಟಗೊಂಡ ಈ ಶೆಲ್ ಸುಮಾರು ಒಂದು ವರ್ಷ ಹಿಂದಿನದ್ದಾಗಿತ್ತೆಂದು ಅವರು ತಿಳಿಸಿದ್ದಾರೆ.
ಸೇನೆಯ ಫೈರಿಂಗ್ ರೇಂಜ್‌ನಲ್ಲಿ ಬಿದ್ದುಕೊಂಡಿದ್ದ ಈ ಸಜೀವ ಸ್ಫೋಟಕವನ್ನು ಮಕ್ಕಳು ಪತ್ತೆಹಚ್ಚಿದ್ದರು. ಅದರ ಅಪಾಯವನ್ನು ತಿಳಿಯದೆಯೇ ಅವರು ಅದನ್ನು ಸಂಗ್ರಹಿಸಿದ್ದರು. ಇಂದು ಸಂಜೆ ಅದು ಸ್ಫೋಟಿಸಿತ್ತು ಎಂದು ಸ್ಥಳೀಯ ಶಾಸಕಿ ದಾಸಾಂಗ್ಲು ಪುಲ್ ತಿಳಿಸಿದ್ದಾರೆ.
Next Story





