ದೂಧ ಗಂಗಾದಿಂದ ಏತ ನೀರಾವರಿಗೆ 2 ಕೋಟಿ ಅನುದಾನ

ಬೆಂಗಳೂರು, ನ.25: ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದ ಪರಿಶಿಷ್ಟ ಪಂಗಡದ ಜನರಿಗೆ ದೂಧ ಗಂಗಾ ನದಿಯಿಂದ ಏತ ನೀರಾವರಿ ಮೂಲಕ ನೂರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು 2 ರೂ. ಕೋಟಿ ಅನುದಾನವನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಂಜೂರು ಮಾಡಿದ್ದಾರೆ.
ಬೆಳಗಾವಿಯ ಕೆ.ಎಲ್.ಇ ಜೆಎನ್‌ಎಮ್‌ಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಅಂತರ್ ರಾಷ್ಟ್ರೀಯ ನರ್ಸಿಂಗ್ ಸಮ್ಮೇಳನದಲ್ಲಿ ಪಾಲ್ಗೊಂಡು, ಯಡ್ರಾಂವ ಗ್ರಾಮದ ಎಸ್ಸಿ ರೈತರ ಜಮೀನುಗಳಿಗೆ ಕೃಷ್ಣ ನದಿಯಿಂದ ಏತ ನೀರಾವರಿ ಮೂಲಕ 70 ಎಕರೆ ಜಮೀನಿಗೆ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು 80 ರೂ. ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ, ಪರಿಷತ್‌ನ ವಿಪಕ್ಷ ಸದಸ್ಯ ಮಹಾಂತೇಶ ಕವಟಗಿಮಠ, ರಾಯಬಾಗ ಕ್ಷೇತ್ರದ ಶಾಸಕ ದುರ್ಯೋದಯ ಐಹೊಳೆ, ಜಿ.ಪಂ. ಮಾಜಿ ಸದಸ್ಯ ಮಹೇಶ ಭಾತೆ, ನಿಪ್ಪಾಣಿ ಬಿಜೆಪಿ ಮಂಡಳ ಗ್ರಾಮೀಣ ಅಧ್ಯಕ್ಷ ಸಂಜಯ ಶಿಂತ್ರೆ, ಹಾಗೂ ವಾಳಕಿ ಮತ್ತು ಯಡ್ರಾಂವ ಗ್ರಾಮ ಎಸ್ಸಿ-ಎಸ್ಟಿ ರೈತರು ಸಚಿವರಿಗೆ ಪೇಟ ತೊಡಿಸಿ, ಶಾಲು ಹೋದಿಸಿ ಸನ್ಮಾನಿಸಿದರು.





