ಅಮೆರಿಕದ ವಿರುದ್ಧ ಒಂದಾಗಲು ಜಗತ್ತಿನ ಮುಸ್ಲಿಮರಿಗೆ ಇರಾನ್ ಕರೆ
ಸೌದಿ ಅರೇಬಿಯನ್ನರು ನಮ್ಮ ಸಹೋದರರು ಎಂದ ಹಸನ್ ರೂಹಾನಿ

ಟೆಹರಾನ್, ನ. 25: ಅಮೆರಿಕದ ವಿರುದ್ಧ ಒಗ್ಗಟ್ಟಾಗುವಂತೆ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಜಗತ್ತಿನ ಮುಸ್ಲಿಮರನ್ನು ಒತ್ತಾಯಿಸಿದ್ದಾರೆ ಹಾಗೂ ಸೌದಿ ಅರೇಬಿಯನ್ನರು ನಮ್ಮ ‘ಸಹೋದರರು’ ಹಾಗೂ ಅವರು ಇರಾನ್‌ಗೆ ಹೆದರಬೇಕಾಗಿಲ್ಲ ಎಂಬ ಭರವಸೆ ನೀಡಿದ್ದಾರೆ.
ಜಗತ್ತಿನ ಪ್ರಬಲ ದೇಶಗಳು 2015ರಲ್ಲಿ ಇರಾನ್ ಜೊತೆ ಮಾಡಿಕೊಂಡಿರುವ ಪರಮಾಣು ಒಪ್ಪಂದದಿಂದ ಅಮೆರಿಕವು ಮೇ ತಿಂಗಳಲ್ಲಿ ಹಿಂದೆ ಸರಿದಿರುವುದನ್ನು ಸ್ಮರಿಸಬಹುದಾಗಿದೆ. ಬಳಿಕ, ಇರಾನ್ ಮೇಲೆ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಹೇರಿದೆ.
‘‘ಅಮೆರಿಕ ಮಧ್ಯಪ್ರಾಚ್ಯದಿಂದ ಬಯಸುವುದು ಗುಲಾಮಗಿರಿಯನ್ನು’’ ಎಂದು ರಾಜಧಾನಿ ಟೆಹರಾನ್‌ನಲ್ಲಿ ನಡೆದ ಇಸ್ಲಾಮಿಕ್ ಏಕತಾ ಸಮಾವೇಶದಲ್ಲಿ ಮಾತನಾಡಿದ ರೂಹಾನಿ ಹೇಳಿದರು.
‘‘ಪಾತಕಿಗಳಿಗೆ ಕೆಂಪುಹಾಸಿನ ಸ್ವಾಗತ ನೀಡುವುದರ ಬದಲು, ಮುಸ್ಲಿಮ್ ದೇಶಗಳು ಅಮೆರಿಕ ಮತ್ತು ಈ ವಲಯದ ಕ್ಯಾನ್ಸರ್‌ಕಾರಕ ಗಡ್ಡೆ ಇಸ್ರೇಲ್ ವಿರುದ್ಧ ಒಂದಾಗಬೇಕು’’ ಎಂದು ಅವರು ಕರೆ ನೀಡಿದರು.
Next Story





