ಬಹರೈನ್: ಸಂಸದೀಯ ಚುನಾವಣೆಯಲ್ಲಿ 67ಶೇ. ಮತದಾನ
ಮನಾಮ (ಬಹರೈನ್), ನ. 25: ಬಹರೈನ್ನಲ್ಲಿ ರಾಷ್ಟ್ರೀಯ ಮತ್ತು ಮುನಿಸಿಪಲ್ ಮಟ್ಟದಲ್ಲಿ ಪ್ರತಿನಿಧಿಗಳನ್ನು ಆರಿಸಲು ಶನಿವಾರ ನಡೆದ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಮತದಾನ ಮಾಡಿದರು.
ಪ್ರಾಥಮಿಕ ಮಾಹಿತಿಗಳ ಪ್ರಕಾರ, 67 ಶೇಕಡ ಮತದಾನವಾಗಿದೆ. 2014ರಲ್ಲಿ ನಡೆದ ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ 53 ಶೇಕಡ ಮತದಾನಕ್ಕೆ ಹೋಲಿಸಿದರೆ, ಈ ಬಾರಿ ಅಗಾಧ ಹೆಚ್ಚಳವಾಗಿದೆ ಎಂದು ಬಹರೈನ್ ನ್ಯೂಸ್ ಏಜನ್ಸಿ ಹೇಳಿದೆ.
ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ದಾಖಲೆ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ 39 ಮಹಿಳೆಯರು ಸ್ಪರ್ಧಿಸಿದರೆ, ಮುನಿಸಿಪಲ್ ಕೌನ್ಸಿಲ್ಗೆ 8 ಮಹಿಳೆಯರು ಸ್ಪರ್ಧಿಸಿದ್ದಾರೆ.
Next Story