ಅನಘ ಮೋಟರ್ಸ್‌ನಿಂದ ‘ಅಪೆಕ್ಸ್ ಪ್ರೆಡೆಟರ್ ಸುಝುಕಿ’ ಬೈಕ್‌ಗೆ ಚಾಲನೆ

ಮಂಗಳೂರು, ನ.26: ಅನಘ ಮೋಟರ್ಸ್ ಸುಝುಕಿಯಿಂದ ‘ಅಪೆಕ್ಸ್ ಪ್ರೆಡೆಟರ್ ಸುಝುಕಿ ಜಿಎಸ್‌ಎಕ್ಸ್ ಎಸ್750’ ದ್ವಿಚಕ್ರ ವಾಹನವನ್ನು ಮಂಗಳೂರಿನಲ್ಲಿ ಮೊದಲ ಬಾರಿಗೆ ನಗರದ ಯೆಯ್ಯಾಡಿಯ ಅನಘ ಮೋಟರ್ಸ್ ಸುಝುಕಿ ಶೋರೂಂನಲ್ಲಿ ಸೋಮವಾರ ಅನಾವರಣಗೊಳಿಸಲಾಯಿತು.
‘ಅಪೆಕ್ಸ್ ಪ್ರೆಡೆಟರ್ ಸುಝುಕಿ’ ದ್ವಿಚಕ್ರ ವಾಹನವನ್ನು ಪ್ರಥಮ ಗ್ರಾಹಕ ಕಾರ್ತಿಕ್ ಹೆಗಡೆ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಅಪೆಕ್ಸ್ ಪ್ರೆಡೆಟರ್ ಬೈಕ್ ಇದು ವಿಶೇಷ ಇಂಜಿನ್‌ನ್ನು ಹೊಂದಿದೆ. ಈ ಬೈಕ್‌ನ್ನು ಸವಾರಿ ಮಾಡುವುದರಿಂದ ಮನಸನ್ನು ರೋಮಾಂಚಕಗೊಳಿಸುತ್ತದೆ. ಇದೇ ಮೌಲ್ಯದಲ್ಲಿ ಕಾರನ್ನು ತೆಗೆದುಕೊಳ್ಳಬಹುದಿತ್ತು. ಆದರೆ, ಬೈಕ್‌ನ್ನು ಖರೀದಿಸುತ್ತಿರುವುದು ಒಂದು ಫ್ಯಾಶನ್ ಆಗಿದೆ. ಬೈಕ್‌ಗಳ ಖರೀದಿಯ ಭರಾಟೆ ಹೆಚ್ಚಲಿ ಎಂದು ಶುಭ ಹಾರೈಸಿದರು.
ಅನಘ ಮೋಟರ್ಸ್ ಸುಝುಕಿ ಶೋರೂಂನ ವ್ಯವಸ್ಥಾಪಕ ನಿರ್ದೇಶಕ ವೆಂಕಟ ಫಣಿ ಮಾತನಾಡಿ, ‘ಅಪೆಕ್ಸ್ ಪ್ರೆಡೆಟರ್ ಸುಝುಕಿ’ ದ್ವಿಚಕ್ರ ವಾಹನವನ್ನು ಮಂಗಳೂರು ಸೇರಿದಂತೆ ಇಡೀ ಕರಾವಳಿಗೆ ಪರಿಚಯಿಸಲಾಗುತ್ತಿದೆ. ಇದರ ವೌಲ್ಯ 9.5 ಲಕ್ಷ ರೂ.ಆಗಿದೆ. ಈಗಾಗಲೇ ‘ಅಪೆಕ್ಸ್ ಪ್ರೆಡೆಟರ್ ಸುಝುಕಿ’ಯ ಆರು ಬೈಕ್‌ಗಳು ಬುಕ್ ಆಗಿವೆ ಎಂದರು.
ಈ ಬೈಕ್ ತುಂಬಾ ವಿಶೇಷತೆಯಿಂದ ಕೂಡಿದ್ದು, 749 ಸಿಸಿ ಇಂಜಿನ್‌ನ್ನು ಹೊಂದಿದೆ. ನಾಲ್ಕು ಸಿಲಿಂಡರ್‌ಗಳನ್ನು ಬೈಕ್‌ಗೆ ಅಳವಡಿಸಲಾಗಿದೆ. ಬೈಕ್‌ನ Torque 81 ಎನ್‌ಎಂ/9000 ಆರ್‌ಪಿಎಂ ಇದ್ದು, 114.2 ಪಿಎಸ್/ 10500 ಆರ್‌ಪಿಎಂ ಪವರ್‌ನ್ನು ಹೊಂದಿದ್ದು, ಪ್ರತಿ ಗಂಟೆಗೆ 157 ಕಿ.ಮೀ. ವೇಗದಲ್ಲಿ ಸವಾರಿ ಮಾಡಬಹುದಾಗಿದೆ. ಇದರಲ್ಲಿ ಡುಯೆಲ್ ಚಾನೆಲ್ ಎಬಿಎಸ್‌ನ್ನು ಇದ್ದು, ಎಲ್‌ಇಡಿ ಜೊತೆ ಹಾಲೊಜೆನ್‌ಯುಕ್ತ ಹೆಡ್‌ಲೈಟ್‌ನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನಘ ಮೋಟರ್ಸ್‌ನ ಯುನಿಕ್ ಹೆಡ್ ಅಕ್ಷಯ್ ಉಪಸ್ಥಿತರಿದ್ದರು.