'ಸಾಹಿತ್ಯಾಧ್ಯಯನ ಇಂದಿನ ಸಮಾಜಕ್ಕೆ ಅತ್ಯಗತ್ಯ' ಎಕ್ಸಲೆಂಟ್ ಕನ್ನಡಹಬ್ಬ : ಡಾ. ವರದರಾಜ ಚಂದ್ರಗಿರಿ

ಮೂಡುಬಿದಿರೆ, ನ.26: 'ವಿಜ್ಞಾನ ಬುದ್ಧಿವಂತಿಕೆಯನ್ನು ಹೆಚ್ಚಿಸಿದರೆ, ಸಾಹಿತ್ಯ ಹೃದಯ ವೈಶಾಲ್ಯವನ್ನು ಹೆಚ್ಚಿಸುತ್ತದೆ' ಎಂದು ಖ್ಯಾತ ವಿದ್ವಾಂಸ ಹಾಗೂ ಪ್ರಾಧ್ಯಾಪಕರಾದ ಡಾ.ವರದರಾಜ ಚಂದ್ರಗಿರಿ ಅವರು ಹೇಳಿದರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಅಯೋಜಿಸಲಾದ ಕನ್ನಡಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಸಮನ್ವಯಕಾರರಾಗಿ ಮಾತನಾಡಿದ ಅವರು 'ಸಾಹಿತ್ಯ ನಮ್ಮ ಆಂತರಿಕ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹಾಗಾಗಿ 'ಸಾಹಿತ್ಯಾಧ್ಯಯನ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ'ಯೆಂದು ಅವರು ಹೇಳಿದರು.
ಅವರು ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಕನ್ನಡ ಹಬ್ಬದ ಕವಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ನಾರಾಯಣ ರೈ ಕುಕ್ಕುವಳ್ಳಿ, ಪುತ್ತೂರು, ಡಿ.ಎಂ ಭಟ್ ಕುಳವೆ ಸಿರ್ಸಿ, ಪ.ಮಾನು. ಸಗರ ಗುಲ್ಬರ್ಗ, ಶಿವಕುಮಾರ್ ಗು.ಶಿವಸಿಂಪಿ ವಿಜಯಪುರ, ವಿ ಸುಬ್ರಮಣ್ಯ ಭಟ್ ತುಂಬೆ ಬಂಟ್ವಾಳ, ಮಾ. ಮಹೇಶ್ ಮಲೆಯೂರು ಮೈಸೂರು, ಡಿ.ವಿ.ರಾಜಹೆಗ್ಡೆ ನಿಡ್ಡೋಡಿ, ಶರಶ್ಚಂದ್ರ ರಾನಡೆ ಬೆಂಗಳೂರು, ನೀರಜ ಓಕುಡ ಉಡುಪಿ, ಡಿ.ಬಿ.ಢಂಗ ಧಾರವಾಡ, ಸದಾನಂದ ನಾರಾವಿ ಕಾರ್ಕಳ, ಅಭಿನಂದನ್ ಎಂ ಮಂಡ್ಯ, ಲಿಂಗಸಂದ್ರ ತಿಪ್ಪೆಸ್ವಾಮಿ ತುಮಕೂರು, ಮರಿಯನ್ ಪಿಯೂಸ್ ಡಿ'ಸೋಜ ಮಂಗಳೂರು, ಆನಂದ ಜಿ ಕನಕಪುರ, ಶ್ರೀವಾಣಿ ಕಾಕುಂಜೆ, ವಿಜಯಲಕ್ಷ್ಮಿ ಪ್ರಸಾದ್ ರೈ ಕೋಣಾಜೆ, ಅದ್ವೈತ ಕೆ ಅಡ್ಯನಡ್ಕ, ಸ್ಫೂರ್ತಿ ಮೂಡುಪಡುಕೋಡಿ, ಪ್ರಹ್ಲಾದಮೂರ್ತಿ ಭಟ್ ಕಡಂದಲೆ, ಶರಣಪ್ಪ ಗದಗ, ಪಿ.ಎಸ್ ನಾರಾಯಣ ಭಟ್ ಕೊೈಲ, ಕ.ಲ.ರಘು ದೊಡ್ಡಬಳ್ಳಾಪುರ, ಎಂ.ಎಸ್. ನಾಗರಾಜು ಮೂಡಿಗೆರೆ ಇವರು ಪಾಲ್ಗೊಂಡಿದ್ದರು.
ಎಕ್ಸಲೆಂಟ್ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಪ್ರಕೃತಿ ಮಾರೂರು, ಮೌಲ್ಯ ವೈ ಆರ್ ಜೈನ್, ಚಂದನ, ಸಾನ್ವಿ, ಪ್ರತೀಕ್ಷಾ ಇವರು ಬಾಬಣ್ಣ ಪುತ್ತೂರು, ಜಗದೀಶ, ಜನಾರ್ದನ ಅವರ ಸಂಗೀತ ಸಂಯೋಜನೆಯಲ್ಲಿ ಕವಿಗಳ ಕವನಕ್ಕೆ ಗಾಯನ ನಡೆಸಿಕೊಟ್ಟರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಂಜನ್, ತುಷಾರ್, ಸಹನಾ ಕಲಾ ಶಿಕ್ಷಕ ಪ್ರವೀಣ್ ಕಕ್ಕಿಂಜೆ ಅವರ ಮಾರ್ಗದರ್ಶನದಲ್ಲಿ ಕವಿತೆಗಳಿಗೆ ಸೂಕ್ತವಾದ ವರ್ಣವಿನ್ಯಾಸ ಮಾಡಿದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಕವಿಗಳನ್ನು ಸ್ಮರಣಿಕೆ, ಗ್ರಂಥ, ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕನ್ನಡ ವಿಭಾಗದ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.