ಆರ್‌ಬಿಐ ಒಂದು ಲಕ್ಷ ಕೋ.ರೂ ಹೆಚ್ಚುವರಿ ಮೀಸಲನ್ನು ಸರಕಾರಕ್ಕೆ ವರ್ಗಾಯಿಸಬಹುದು: ಬಿಎಎಂಎಲ್ ವರದಿ
ಮುಂಬೈ,ನ.26: ಆರ್‌ಬಿಐ ಬಳಿ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಮೀಸಲು ನಿಧಿಯಿದೆ ಮತ್ತು ವಿಶೇಷವಾಗಿ ರಚಿತ ಸಮಿತಿಯು ‘ಹೆಚ್ಚುವರಿ ಬಂಡವಾಳ ’ವನ್ನು ಗುರುತಿಸಿದ ಬಳಿಕ ಅದು ಒಂದು ಲ.ಕೋ.ರೂ.ಗೂ ಅಧಿಕ ಮೊತ್ತವನ್ನು ಸರಕಾರಕ್ಕೆ ವರ್ಗಾಯಿಸಬಹುದು ಎಂದು ಬ್ರೋಕರೇಜ್ ಮತ್ತು ಆರ್ಥಿಕ ವಿಶ್ಲೇಷಣೆ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕಾ ಮೆರಿಲ್ ಲಿಂಚ್(ಬಿಎಎಂಎಲ್) ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.
ಸಮಿತಿಯನ್ನು ರಚಿಸಲು ಆರ್‌ಬಿಐ ಆಡಳಿತ ಮಂಡಳಿಯು ಕಳೆದ ವಾರ ನಡೆದಿದ್ದ ತನ್ನ ಸಭೆಯಲ್ಲಿ ನಿರ್ಧರಿಸಿದ್ದು, ಈ ವಾರ ಸಮಿತಿಯು ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಆರ್‌ಬಿಐನ ಆರ್ಥಿಕ ಬಂಡವಾಳ ಮಾರ್ಗಸೂಚಿಯ ಕುರಿತು ಉದ್ದೇಶಿತ ಸಮಿತಿಯು ಒಂದರಿಂದ ಮೂರು ಲ.ಕೋ.ರೂ.ಗಳನ್ನು(ಜಿಡಿಪಿಯ ಶೇ.0.5ರಿಂದ ಶೇ.1.6)ಹೆಚ್ಚುವರಿ ಬಂಡವಾಳ ಎಂದು ಗುರುತಿಸಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಬಿಎಎಂಎಲ್ ಹೆಳಿದೆ.
ವರ್ಗಾವಣೆಯು ಹೆಚ್ಚುವರಿ ಸಾದಿಲ್ವಾರು ಮೀಸಲಿಗೆ ಸೀಮಿತಗೊಂಡರೆ ಮತ್ತು ಒಟ್ಟು ಬಂಡವಾಳವನ್ನು ಸೇರಿಸಿದರೆ ಅದು ಮೂರು ಲ.ಕೋ.ರೂ.ಗಳಾದರೆ ಆರ್‌ಬಿಐ ಒಂದು ಲ.ಕೋ.ರೂಗಳನ್ನು ಸರಕಾರಕ್ಕೆ ವರ್ಗಾಯಿಸಬಹುದು ಎಂದು ವರದಿಯು ತಿಳಿಸಿದೆ.