ಮಂಡ್ಯ: ರಾಷ್ಟ್ರೀಯ ಶಾಲಾ ಚೆಸ್‍ಗೆ ಬಾಲಕ ಆಯ್ಕೆ

ಮಂಡ್ಯ, ನ.26: ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನ.22ರಿಂದ 24ರವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಹದಿನಾಲ್ಕು ವರ್ಷದೊಳಗಿನ ಬಾಲಕರ ಚೆಸ್ ಪಂದ್ಯಾವಳಿಯಲ್ಲಿ ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ತನವ್ ಎಸ್. ಒಂಬತ್ತು ಸುತ್ತಿನಲ್ಲಿ ಏಳೂವರೆ ಪಾಯಿಂಟ್ ಗಳಿಸಿ ಪ್ರಥಮ ಸ್ಥಾನ ಪಡೆದು ಎಸ್‍ಜಿಎಫ್‍ಐ (ಸ್ಕೂಲ್ ಗೇಮ್ಸ್ ಫೆಡೆರೇಷನ್ ಆಫ್ ಇಂಡಿಯಾ) ರಾಷ್ಟ್ರೀಯ ಶಾಲಾ ಚೆಸ್‍ಗೆ ರಾಜ್ಯ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಸದರಿ ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ 143 ಸ್ಪರ್ಧಿಗಳು ಭಾಗವಹಿಸಿದ್ದರು. ರಾಷ್ಟ್ರೀಯ ಶಾಲಾ ಚೆಸ್ ಪಂದ್ಯಾವಳಿಯು ಮಹಾರಾಷ್ಟ್ರದ ದಾದರ್ ನಗರದಲ್ಲಿ ಡಿ. 11ರಿಂದ 13ರವರೆಗೆ ನಡೆಯಲಿದೆ. ಶಿಲ್ಪಾ ಹಾಗೂ ಡಾ.ಸುದರ್ಶನ್ ದಂಪತಿ ಪುತ್ರನಾಗಿರುವ ತನವ್ ಸಂಸ್ಕೃತಿ ಗುರುಕುಲ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂದು ಮಂಡ್ಯ ಚೆಸ್ ಅಕಾಡೆಮಿ ತರಬೇತುದಾರ ಮಂಜುನಾಥ್ ಜೈನ್ ತಿಳಿಸಿದ್ದಾರೆ.
Next Story





