ನ.30: ‘ಮೇಲ್ತೆನೆ ಮೀಲಾದ್ ಬ್ಯಾರಿ ಕವನ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರು, ನ.26: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ ‘ಮೇಲ್ತೆನೆ’ ಸಂಘಟನೆಯು ಪ್ರವಾದಿ ಮುಹಮ್ಮದ್ (ಸ)ರ ಜನ್ಮದಿನಚಾರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಆನ್‌ಲೈನ್ ಬ್ಯಾರಿ ಕವನ ಸ್ಪರ್ಧೆಯ ವಿಜೇತರಿಗ ಬಹುಮಾನ ವಿತರಣಾ ಕಾರ್ಯಕ್ರಮವು ನ.30ರಂದು ಸಂಜೆ 3 ಗಂಟೆಗೆ ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಲಿದೆ.
‘ಮೇಲ್ತೆನೆ’ಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ‘ಮೇಲ್ತೆನೆ’ಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ.ಬಶೀರ್, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬುದಾಬಿಯ ಬ್ಯಾರೀಸ್ ವೆಲ್ಫೇರ್ ಫಾರಂನ ಸಲಹೆಗಾರ ಮುಹಮ್ಮದ್ ಕಲ್ಲಾಪು ಭಾಗವಹಿಸಲಿದ್ದಾರೆ. ಈ ಸಂದರ್ಭ ಸ್ಪರ್ಧಾ ವಿಜೇತರ ಕವಿಗೋಷ್ಠಿಯೂ ನಡೆಯಲಿದೆ.
ಸ್ಪರ್ಧೆಯಲ್ಲಿ ವಿಜೇತರಾದ ಮುಹಮ್ಮದ್ ಅನ್ವರ್ ಬಿನ್ ಅಬ್ಬಾಸ್ (ಪ್ರಥಮ), ಮಿಸ್ರಿಯಾ ಐ.ಪಜೀರ್ (ದ್ವಿತೀಯ), ನಿಝಾಮ್ ಗೋಳಿಪಡ್ಪು (ತೃತೀಯ) ಹಾಗೂ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದ ಸಮ್ಮಿ ಪಾನೇಲ, ರಫೀಕ್ ಕಲ್ಕಟ್ಟ, ಅನ್ಸಾರ್ ಕಾಟಿಪಳ್ಳ, ಇಬ್ರಾಹಿಂ ಬಾತಿಷ್ ಗೋಳ್ತಮಜಲು, ಎ.ಕೆ. ನಂದಾವರ, ಕಬೀರ್ ಹಾಸನ (ಅಲ್ ಮದೀನಾ), ಅಕ್ಬರ್ ಅಲಿ ಬಜ್ಪೆ, ನಿಝಾಮುದ್ದೀನ್ ಉಪ್ಪಿನಂಗಡಿ, ಅಬೂಬಕರ್ ಪುತ್ತಿಲ, ರುಕ್ಸಾನಾ ಫಾತಿಮಾ ಉಪ್ಪಿನಂಗಡಿ ಅವರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.







