Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಥೆ ಹೇಳುವ ಚಿತ್ರಗಳು: ಕಣ್ಮನ ಸೆಳೆದ...

ಕಥೆ ಹೇಳುವ ಚಿತ್ರಗಳು: ಕಣ್ಮನ ಸೆಳೆದ ಅಪರೂಪದ-ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನ

ಶಿವಮೊಗ್ಗ

ವರದಿ: ಬಿ.ರೇಣುಕೇಶ್ವರದಿ: ಬಿ.ರೇಣುಕೇಶ್26 Nov 2018 11:10 PM IST
share
ಕಥೆ ಹೇಳುವ ಚಿತ್ರಗಳು: ಕಣ್ಮನ ಸೆಳೆದ ಅಪರೂಪದ-ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನ

ಶಿವಮೊಗ್ಗ, ನ. 26: ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿತವಾಗಿರುವ ಉದಯೋನ್ಮುಖ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‍ರವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಲ್ಲಿ ಕಂಡುಬಂದ, ಕೆಲ ಅಪರೂಪದ - ಆಕರ್ಷಕ ಛಾಯಾಚಿತ್ರಗಳು ಪ್ರಮುಖ ಝಲಕ್‍ಗಳು ಕೆಲವು ಮನಸ್ಸಿಗೆ ಮುದ ನೀಡಿದರೆ, ಮತ್ತೆ ಕೆಲವು ಕಣ್ಮನಗಳೆರಡನ್ನು ತಣಿಸುತ್ತವೆ.

ಪ್ರದರ್ಶನದಲ್ಲಿರುವ ಪ್ರತಿ ಛಾಯಾಚಿತ್ರವೂ ವಿಶಿಷ್ಟ ಕಥೆಯೊಂದನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಕೆಲ ಛಾಯಾಚಿತ್ರಗಳು ನೋಡುಗರೊಂದಿಗೆ ಸಮಾಲೋಚಿಸುತ್ತಿರುವ ಅನುಭವ ಉಂಟು ಮಾಡುತ್ತವೆ. 'ಸಾವಿರ ಪದಗಳು ಹೇಳಲಾಗದ್ದನ್ನು, ಒಂದು ಚಿತ್ರ ಹೇಳಬಲ್ಲದು..' ಎಂಬ ಮಾತು ಇಲ್ಲಿ ಸತ್ಯವಾಗಿದೆ.  

ರಾಜ್ಯದ ಪ್ರತಿಷ್ಠಿತ ಸಂಘಗಳಲ್ಲೊಂದಾದ 'ಕರ್ನಾಟಕ ಸಂಘ'ವು ತನ್ನ 88 ನೇ ವಾರ್ಷಿಕೋತ್ಸವದ ಅಂಗವಾಗಿ, ಬಿ.ಹೆಚ್.ರಸ್ತೆಯಲ್ಲಿರುವ ಸಂಘದ ಕಟ್ಟಡದ ಆವರಣದಲ್ಲಿ ನ. 25 ರಿಂದ ನ. 26 ರವರೆಗೆ ಶಿವಮೊಗ್ಗ ನಾಗರಾಜ್‍ರವರ ಛಾಯಾಚಿತ್ರ ಪ್ರದರ್ಶನ ಆಯೋಜಿಸಿತ್ತು. ಈ ಪ್ರದರ್ಶನಕ್ಕೆ ನಾಗರಿಕ ವಲಯದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕಳೆದೆರೆಡು ದಿನಗಳ ಅವಧಿಯಲ್ಲಿ ಹಿರಿ-ಕಿರಿಯರು ಸೇರಿದಂತೆ, ನೂರಾರು ಜನ ಈ ಛಾಯಚಿತ್ರ ವೀಕ್ಷಿಸಿದ್ದಾರೆ. ಅಪರೂಪದ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಾಮಾನ್ಯ ಜೀವನ: ಜನಸಾಮಾನ್ಯರ ದೈನಂದಿನ ಬದುಕು, ಪಶು-ಪಕ್ಷಿ, ವನ್ಯಜೀವಿಗಳ ಜೀವನ ಕ್ರಮ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ನಡೆಸುವ ಬೇಟೆ, ಪ್ರಾಕೃತಿಕ ವಿಸ್ಮಯಗಳು ಸೇರಿದಂತೆ ವಿಭಿನ್ನ ವಿಷಯಗಳ ಸುಮಾರು 25 ಕ್ಕೂ ಅಧಿಕ ವರ್ಣರಂಜಿತ 
ಫೋಟೋಗಳನ್ನು ಪ್ರದರ್ಶನಕ್ಕೀಡಲಾಗಿದೆ. 

ಕಡುಬಡತನದ ಬೇಗೆಯಲ್ಲಿ ಬೆಳೆದುಬಂದ ಶಿವಮೊಗ್ಗ ನಾಗರಾಜ್‍ರವರು, ಕಳೆದ ಒಂದು ದಶಕದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿರುವ ಅವರು, ವರದಿಗಾರರಾಗಿ ತಮ್ಮ ವೃತ್ತಿ ಆರಂಭಿಸಿದ್ದರು. ನಂತರ ಛಾಯಾಗ್ರಹಣದತ್ತ ಆಸಕ್ತಿ ಬೆಳೆಸಿಕೊಂಡರು.

'ಕ್ಯಾಮರ ಖರೀದಿಗಾಗಿ ಸ್ವಂತ ಮನೆಯನ್ನೇ ಅವರು ಮಾರಿದ್ದರು. ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅವರು, ಛಾಯಾಗ್ರಹಣವನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ. ಫೋಟೋಗ್ರಫಿ ವೃತ್ತಿಯ ಬಗ್ಗೆ ಅವರಿಗಿರುವ ಅದಮ್ಯ ಆಸಕ್ತಿಯೇ ಅವರನ್ನು ಓರ್ವ ಅಪರೂಪದ ಛಾಯಾಗ್ರಾಹಕನನ್ನಾಗಿ ಹೊರಹೊಮ್ಮುವಂತೆ ಮಾಡಿದೆ' ಎಂದು ಅವರ ಬಾಲ್ಯ ಸ್ನೇಹಿತ ಮಧುಸೂಧನ್‍ರವರು ಹೇಳುತ್ತಾರೆ. 

ಸಹಕಾರ: ಛಾಯಾಗ್ರಾಹಣ ಕ್ಷೇತ್ರವು ವಿಶಾಲ ಸಾಗರವಿದ್ದಂತೆ. ನಾನಿನ್ನೂ ಈ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದೆನೆ. ಮಹನೀಯರ ಫೋಟೋಗಳಿಗೆ ಹೋಲಿಸಿದರೆ, ನಾನು ತೆಗೆದ ಛಾಯಾಚಿತ್ರಗಳೂ ಏನೂ ಅಲ್ಲವಾಗಿದೆ. ಈ ಕ್ಷೇತ್ರದಲ್ಲಿ ನಾನಿನ್ನೂ ಚಿಕ್ಕವನಾಗಿದ್ದೆನೆ. ನನ್ನ ಫೋಟೋಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಕರ್ನಾಟಕ ಸಂಘಕ್ಕೆ ನಾನು ಆಭಾರಿಯಾಗಿದ್ದೆನೆ' ಎಂದು ಹೇಳುತ್ತಾರೆ.

share
ವರದಿ: ಬಿ.ರೇಣುಕೇಶ್
ವರದಿ: ಬಿ.ರೇಣುಕೇಶ್
Next Story
X