ಉಡುಪಿ : ನ.27ರಂದು ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ, ನ.26: ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣ ಮಠದ ಆಶ್ರಯ ದಲ್ಲಿ ಉಡುಪಿಯ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿ ಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ನ.27ರಂದು ರಾಜಾಂಗಣ ಲ್ಲಿ ಆಯೋಜಿಸಲಾಗಿದೆ.
ಸಂಜೆ ಏಳು ಗಂಟೆಗೆ ನಡೆಯುವ ಸಭಾಕಾರ್ಯಕ್ರಮ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ವಹಿಸ ಲಿರುವರು. ಈ ಸಂದರ್ಭದಲ್ಲಿ ಗಣೇಶ್ ಕೊಲೆಕಾಡಿಗೆ ‘ಯಕ್ಷ ವಿಭೂಷಣ’ ಹಾಗೂ ಕಿಶನ್ ಅಗ್ಗಿತ್ತಾಯಗೆ ‘ಯಕ್ಷೋತ್ಸಾಹಿ’ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥೆಯ ಸಂಚಾಲಕ ಶ್ರೀನಿಧಿ ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ತಂಡದ ಲಾಂಛನ ಮತ್ತು ಅಂತರ್ಜಾಲ ಪುಟದ ಅನಾವರಣ ಹಾಗೂ ದಿ.ವಾಸುದೇವ ಪೈ ಸ್ಮರಣೆಯಲ್ಲಿ ನಡೆದ ಯಕ್ಷಗಾನ ಛಾಯಾಚಿತ್ರಗಳ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಾಗುವುದು. ಬಳಿಕ ತಂಡದ ಸದಸ್ಯರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಭಾವನ ಕೆರೆಮಠ, ಕಿರಣ್ ಭಟ್ ಉಪಸ್ಥಿತರಿದ್ದರು.
Next Story