‘ನಿರಂತರ್’ ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ
ಉಡುಪಿ, ನ.26: ಕೊಂಕಣಿ ಕಲೆಗೆ, ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ‘ನಿರಂತರ್’ ಉದ್ಯಾವರ ಸಾಂಸ್ಕೃತಿಕ ಸಂಸ್ಥೆಯ ನೂತನ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಮೈಕಲ್ ಡಿಸೋಜ, ಕೋಶಾಧಿಕಾರಿಯಾಗಿ ರೋಶನ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಸವಿತಾ ಡಿಸೋಜ, ಸಾಂಸ್ಕೃತಿಕ ಕಾರ್ಯ ದರ್ಶಿಯಾಗಿ ಜೂಲಿಯ ಡಿಸೋಜ, ಮಾಧ್ಯಮ ಸಂಚಾಲಕರಾಗಿ ರೋಶನ್ ಡಿಸೋಜ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೊನಾಲ್ಡ್ ಡಿಸೋಜ, ಅನಿಲ್ ಡಿಸೋಜ, ಸುನೀಲ್ ಡಿಸೋಜ, ಒಲಿವಿರಾ ಕಾರ್ಡ್ರೆಸ್, ಸಿಂಥಿಯಾ ನೋರನ್ನ ಜುಡಿತ್ ಪಿರೇರ ಆಯ್ಕೆಯಾಗಿದ್ದಾರೆ.
Next Story