ಬೇಕಲ: ರೈಲಿನಿಂದ ಬಿದ್ದು ಯುವಕ ಮೃತ್ಯು

ಕಾಸರಗೋಡು, ನ.27: ರೈಲಿನಲ್ಲಿ ಪತ್ನಿಯೊಂದಿಗೆ ಮುಂಬೈಗೆ ಪ್ರಯಾಣಿಸುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬೇಕಲ ಸಮೀಪದ ಕಳ್ನಾಡು ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ತ್ರಿಶ್ಯೂರು ನಿವಾಸಿ ಮುಹಮ್ಮದಲಿ (24) ಎಂದು ಗುರುತಿಸಲಾಗಿದೆ.
ಮುಂಬೈಯಲ್ಲಿ ವೆಬ್ ಡಿಸೈನರ್ ಆಗಿದ್ದ ಇವರು ಪತ್ನಿಯೊಂದಿಗೆ ಮುಂಬೈಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ನೇತ್ರಾವತಿ ರೈಲು ಬೇಕಲ ಸಮೀಪದ ಕಳ್ನಾಡಿನ ಸುರಂಗ ಹಳಿಯಲ್ಲಿ ಸಂಚರಿಸುತ್ತಿದ್ದ ವೇಳೆ ಮುಹಮ್ಮದಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರೆನ್ನಲಾಗಿದೆ. ಈ ಘಟನೆ ಪತ್ನಿಗೆ ತಡವಾಗಿ ತಿಳಿದುಬಂತೆನ್ನಲಾಗಿದೆ. ಮುಹಮ್ಮದಲಿಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿಡಲಾಗಿದೆ.
Next Story