‘ಪಾಸ್‌ಪೋರ್ಟ್’ ಕೊಂಕಣಿ ಚಿತ್ರದ ಭಿತ್ತಿಪತ್ರ ಅನಾವರಣ

ಕಾಪು, ನ.27: ಕ್ರಿಸ್ತಜ್ಯೋತಿ ಸಿನಿ ಕ್ರಿಯೇಷನ್ಸ್‌ರವರ ನೂತನ ಕೊಂಕಣಿ ಚಲನಚಿತ್ರ ‘ಪಾಸ್‌ಪೋರ್ಟ್’ ಇದರ ಭಿತ್ತಿಪತ್ರ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಶಂಕರಪುರದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಂತ ಜೋನ್ ಪಿಯು ಕಾಲೆಜಿನ ಪ್ರಾಂಶುಪಾಲ ವಂ.ವಿನ್ಸೆಂಟ್ ಕುವೆಲ್ಲೊ ಭಿತ್ತಿಪತ್ರ ಅನಾವರಣಗೊಳಿಸಿದರು. ಚಿತ್ರಕಥೆ ಯನ್ನು ಬರೆದು, ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಸಂತ ಜೋನ್ ಚರ್ಚ್‌ನ ಸಹಾಯಕ ಧರ್ಮಗುರು ವಂ.ರೊಯ್ಸನ್ ಫೆರ್ನಾಂಡಿಸ್ ಮಾತನಾಡಿದರು.
ಚಿತ್ರ ನಿರ್ದೇಶಕ ವಿನೋದ್ ಗಂಗೊಳ್ಳಿ ಮಾತನಾಡಿ, ಪ್ರೇಕ್ಷಕರು ಸಿನೆಮಾ ಮಂದಿರಗಳಿಗೆ ಹೋಗುವ ಪರಿಪಾಠ ಕಡಿಮೆಯಾಗಿರುವ ಈ ಕಾಲದಲ್ಲಿ ಜನರಿದ್ದಲ್ಲಿಗೆ ಸಿನೆಮಾವನ್ನು ಕೊಂಡೊಯ್ಯುವ ಚಿಂತನೆ ಈ ಚಿತ್ರ ತಂಡಕ್ಕಿದೆ. ಒಂದು ತಿಂಗಳ ಕಾಲ ಉಡುಪಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆಯಲ್ಲಿದ್ದು, ಎರಡು ಸುಂದರ ಹಾಡುಗಳನ್ನು ಹೊಂದಿರುವ ಈ ಚಿತ್ರ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ನಟರಾದ ವಾಲ್ಸ್ಟನ್ ಡೆಸಾ, ವಿನ್ಸೆಂಟ್ ಮಾರ್ಟಿಸ್, ಮಾರ್ಕ್ ವಾಜ್, ಕ್ಲೇರಾ ಮೆಂಡೋನ್ಸಾ, ಜೋನ್ ರೊಡ್ರಿಗಸ್ ಮತ್ತು ಚಿತ್ರ ಕಲಾವಿದರು ಈ ಸಂದಭರ್ದಲ್ಲಿ ಉಪಸ್ಥಿತರಿದ್ದರು.