ಶ್ರೀವಿಶ್ವಪ್ರಸನ್ನರ ದ್ವಾರಕಾ ಯಾತ್ರೆ ಮುಕ್ತಾಯ

ಉಡುಪಿ, ನ.27: ಉಡುಪಿಯ ಶ್ರೀಪೇಜಾವರ ಮಠದ ಕಿರಿಯ ಯತಿ ಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಅಭಿಮಾನಿಗಳು ಹಾಗೂ ಶಿಷ್ಯರೊಂದಿಗೆ ನಡೆಸಿದ ದ್ವಾರಕಾ ಯಾತ್ರೆ ಇಂದು ಸಮಾಪ್ತಿಗೊಂಡಿತು.
ಸುಮಾರು 300 ಮಂದಿ ಭಕ್ತರೊಂದಿಗೆ ಯಾತ್ರೆ ನಡೆಸಿದ ಶ್ರೀಗಳು ಪೇಟ್ ದ್ವಾರಕಾ, ಪ್ರಭಾಸ ಹಾಗೂ ಪಿಂಡಾರಕ ಕ್ಷೇತ್ರಗಳನ್ನೂ ಸಂದರ್ಶಿಸಿದರು. ಈ ಕ್ಷೇತ್ರಗಳ ಐತಿಹ್ಯಗಳ ಬಗ್ಗೆ ಶ್ರೀಗಳು ಹಾಗೂ ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಉಪನ್ಯಾಸ ನೀಡಿದರು. ಯಾತ್ರೆ ಅ.24ರಂದು ದ್ವಾರಕಾ ಕ್ಷೇತ್ರ ದರ್ಶನದೊಂದಿಗೆ ಆರಂಭಗೊಂಡಿತ್ತು.
Next Story