ಉಡುಪಿ: ಡಿ.1ರಂದು ವಾಯ್ಸ್ ಆಫ್ ಉಡುಪಿ ಫೈನಲ್ಸ್
ಉಡುಪಿ, ನ.27: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ವಲಯದ 10ನೇ ವಾರ್ಷಿಕೋತ್ಸವದ ಅಂಗವಾಗಿ ಗಾನ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಹಮ್ಮಿಕೊಳ್ಳಲಾದ ‘ವಾಯ್ಸ್ ಆಫ್ ಉಡುಪಿ’ ಸಂಗೀತ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆ ಡಿ.1ರಂದು ಸಂಜೆ 6:30ಕ್ಕೆ ಉಡುಪಿಯ ಪುರಭವನ ದಲ್ಲಿ ನಡೆಯಲಿದೆ.
ಈ ಬಾರಿ ವಿಜೇತ ರನ್ನು ಆಯ್ಕೆ ಮಾಡುವ ಅವಕಾಶ ಪ್ರೇಕ್ಷಕರಿಗೂ ಇರಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಗೆ ಮೊದಲು ಈ ಹಿಂದಿನ ವಾಯ್ಸ್ ಆಫ್ ಉಡುಪಿಯ ವಿಜೇತರಿಂದ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪ ಸ್ಪರ್ಧಿಗಳಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಅದೃಷ್ಟಶಾಲಿ ಪ್ರೇಕ್ಷಕರಿಗೆ ಸ್ಮಾರ್ಟ್‌ಫೋನ್ ಗೆಲ್ಲುವ ಅವಕಾಶವೂ ಇದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.
Next Story