ಡಿ. 2: ಕಲಾಂಗಣದಲ್ಲಿ ‘ಆ್ಯಂಟಿಗೊನ್’ ಪ್ರದರ್ಶನ
ಮಂಗಳೂರು, ನ.27: ಮಾಂಡ್ ಸೊಭಾಣ್‌ನ ಕಲಾಂಗಣದಲ್ಲಿ ಡಿ.2ರಂದು ಸಂಜೆ 6:30ಗಂಟೆಗೆ 204ನೇ ತಿಂಗಳ ವೇದಿಕೆ ಸರಣಿಯಲ್ಲಿ ‘ಆ್ಯಂಟಿಗೊನ್’ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.
ಸೊಫೊಕ್ಲಿಸನ ಬಹುಚರ್ಚಿತ ನಾಟಕ ಆ್ಯಂಟಿಗೊನ್‌ನ್ನು ಅರುಣ್‌ರಾಜ್ ರೊಡ್ರಿಗಸ್ ಕೊಂಕಣಿಗೆ ಅನುವಾದಿಸಿದ್ದು, ಯುವ ನಿರ್ದೇಶಕ ಯದ್ದು ಉಚ್ಚಿಲ್ ನಿರ್ದೇಶನ ನೀಡಿದ್ದಾರೆ. ಕೊಂಕಣಿಯ ವೃತ್ತಿಪರ ನಾಟಕ ರೆಪರ್ಟರಿ ಕಲಾಕುಲ್ ಇದರ ಕಲಾವಿದರು ಅಭಿನಯಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Next Story